Covid 19: ವಾರದ ಪಾಸಿಟಿವಿಟಿ ಶೇ. 5 ಕ್ಕಿಂತ ಹೆಚ್ಚಾದರೆ ಲಾಕ್‌ಡೌನ್ ಪಕ್ಕಾ.?
ರಾಜ್ಯದಲ್ಲಿ ಒಂದು ವಾರದ ಕೋವಿಡ್ ಪಾಸಿಟಿವಿಟಿ (Covid Positivity Rate) ದರ ಶೇ. 5 ದಾಟಿದರೆ ಅಥವಾ ಐಸಿಯು ಹಾಗೂ ಆಮ್ಲಜನಕ ಉಳ್ಳ ಹಾಸಿಗೆಗಳಲ್ಲಿ ಶೇ.40 ಕ್ಕಿಂತ ಹೆಚ್ಚು ಭರ್ತಿಯಾದರೆ ಲಾಕ್‌ಡೌನ್ ಜಾರಿಗೊಳಿಸುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಬೆಂಗಳೂರು (ಜ. 03): ರಾಜ್ಯದಲ್ಲಿ ಒಂದು ವಾರದ ಕೋವಿಡ್ ಪಾಸಿಟಿವಿಟಿ (Covid Positivity Rate) ದರ ಶೇ. 5 ದಾಟಿದರೆ ಅಥವಾ ಐಸಿಯು ಹಾಗೂ ಆಮ್ಲಜನಕ ಉಳ್ಳ ಹಾಸಿಗೆಗಳಲ್ಲಿ ಶೇ.40 ಕ್ಕಿಂತ ಹೆಚ್ಚು ಭರ್ತಿಯಾದರೆ ಲಾಕ್‌ಡೌನ್ ಜಾರಿಗೊಳಿಸುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
Corona Vaccination: 15-18 ವಯಸ್ಸಿನ 32 ಲಕ್ಷ ಮಕ್ಕಳಿಗೆ ಇಂದಿನಿಂದ ಲಸಿಕಾಕರಣ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಇನ್ನಷ್ಟುಅಪಾಯಕಾರಿ ಮಟ್ಟಕ್ಕೆ ತಲುಪುವುದನ್ನು ತಡೆಯಲು ಸಮಿತಿ ಅನೇಕ ಕ್ರಮಗಳನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಉಳಿದಂತೆ ಅನೇಕ ಹಂತಗಳಲ್ಲಿ ವಿವಿಧ ನಿರ್ಬಂಧ ಹೇರುವಂತೆಯೂ ಸಲಹೆ ನೀಡಲಾಗಿದೆ. ಪಾಸಿಟಿವಿಟಿ ದರಕ್ಕೆ ಅನುಗುಣವಾಗಿ ಕಡಿಮೆ ನಿರ್ಬಂಧ (ಹಳದಿ ಬಣ್ಣ ), ಮಧ್ಯಮ ನಿರ್ಬಂಧ (ಕಿತ್ತಳೆ) ಮತ್ತು ಕಠಿಣ ನಿರ್ಬಂಧ (ಕೆಂಪು) ಇರುವ ಕಟ್ಟುಪಾಡುಗಳನ್ನು ವಿಧಿಸುವಂತೆ ಹೇಳಿದೆ. ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇದ್ದರೆ ಹಳದಿ, ಶೇ.1ರಿಂದ ಶೇ.2ರಷ್ಟಿದ್ದರೆ ಕಿತ್ತಳೆ ಮತ್ತು ಶೇ.2 ದಾಟಿದರೆ ಕೆಂಪು ಎಚ್ಚರಿಕೆ ನೀಡಿ ನಿರ್ಬಂಧ ವಿಧಿಸುವಂತೆ ಸಲಹೆ ನೀಡಿದೆ.