News Hour: ಸರ್ಕಾರದ ಹೊಸ ಕಾರುಬಾರು, ಊರೂರಿಗೆ ಬಾರು ಎಂದ ಡಿಸಿಎಂ, ಚಾನ್ಸೇ ಇಲ್ಲ ಅಂದ ಸಿಎಂ!
ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬಿಗ್ ಇಂಪ್ಯಾಕ್ಟ್. ಹೊಸ ಬಾರ್ ಓಪನ್ ಪ್ರಸ್ತಾವನೆಗೆ ಸರ್ಕಾರ ಬ್ರೇಕ್ ಹಾಕಿದೆ. ಆದರೆ, ಡಿಸಿಎಂ ಮಾತ್ರ ಹೊಸ ಬಾರ್‌ಗಳನ್ನು ತೆರೆದೇ ತೆರೆಯುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು (ಅ.6): ಗ್ರಾಮ ಪಂಚಾಯಿತಿ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ಹೊಸದಾಗಿ 389 ಮದ್ಯದಂಗಡಿ ತೆರೆಯುವ ರಾಜ್ಯ ಸರ್ಕಾರದ ಪ್ಲಾನ್ ಭಾರಿ ವಿರೋಧಕ್ಕೆ ಕಾರಣವಾಗಿತ್ತು.. ಜಿಲ್ಲೆ ಜಿಲ್ಲೆಯಲ್ಲೂ ಮಹಿಳೆಯರು ದಂಗೆ ಎದ್ದಿದ್ದರು. ಪ್ರತಿಭಟನೆ ಕಹಳೆ ಮೊಳಗಿಸಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದ್ದರು.
ಅನೇಕ ಸಂಘಟನೆಗಳು, ಕೆಲ ಕಾಂಗ್ರೆಸ್ ನಾಯಕರುಕೂಡ ವಿರೋಧಿಸಿದ್ದರು. ಏಷ್ಯಾನೆಟ್ ಸುವರ್ಣ ನ್ಯೂಸ್ ಕೂಡ ಈ ಬಗ್ಗೆ ವರದಿ ಪ್ರಸಾರ ಮಾಡಿತ್ತು.. ಕೊನೆಗೂ ಮಹಿಳೆಯರ ಆಕ್ರೋಶಕ್ಕೆ ಮಣಿದ ಸಿಎಂ ಸಿದ್ದರಾಮಯ್ಯ ಯಾವುದೇ ಬಾರ್ ತೆರೆಯಲ್ಲ ಅನ್ನೋ ಭರವಸೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಹೊಸ ಬಾರ್ ತೆರೆಯುವ ಪ್ರಸ್ತಾವನೆ ನಮ್ಮ ಮುಂದಿಲ್ಲ, ಯಾವುದೇ ಕಾರಣಕ್ಕೂ ಹೊಸ ಮದ್ಯದಂಗಡಿ ತೆರೆಯಲ್ಲ ಎಂದಿದ್ದಾರೆ.
ಗ್ಯಾರಂಟಿಗಳಿಗೆ ಖರ್ಚಾದ ಹಣ ಸಂಗ್ರಹಕ್ಕೆ ಮದ್ಯ ಮಾರಾಟದ ಪಂಚಸೂತ್ರ ಸಿದ್ಧಪಡಿಸಿದ ಸರ್ಕಾರ!
ಆದರೆ, ಇತ್ತ ಡಿಸಿಎಂ ಡಿಕೆ ಶಿವಕುಮಾರ್, ಕುಡಿಯುವುದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ, 30 ವರ್ಷದಿಂದ ಅಬಕಾರಿ ಲೈಸೆನ್ಸ್ ನೀಡಿಲ್ಲ ಅನ್ನೋ ಮೂಲಕ ಹೊಸ ಬಾರ್ ತೆರೆಯುವ ಸುಳಿವು ಕೊಟ್ಟಿದ್ದಾರೆ.