ಕೊಲ್ಲಾಪುರದಲ್ಲಿ ಕರ್ನಾಟಕ ಬಸ್‌ಗೆ ಮಸಿ ಬಳಿದ ಶಿವಸೇನೆ, ಬೆಳಗಾವಿ ಉದ್ವಿಘ್ನ!

ಬೆಳಗಾವಿ ಗಡಿ ವಿವಾದ ಇದೀಗ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಸಂಬಂಧವನ್ನು ಮತ್ತಷ್ಟು ಹಳಸಿಸಿದೆ. ಪ್ರತಿ ಬಾರಿ ಬೆಳಗಾವಿ ವಿಚಾರದಲ್ಲಿ ಖ್ಯಾತೆ ತೆಗೆಯುವ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರು ಇದೀಗ ಕರ್ನಾಟಕ ಬಸ್ ಮೇಲೆ ಪುಂಡಾಟ ನಡೆಸಿದ್ದಾರೆ.

Share this Video
  • FB
  • Linkdin
  • Whatsapp

ಬೆಳಗಾವಿ(ನ.25): ಸುಪ್ರೀಂ ಕೋರ್ಟ್‌ನಲ್ಲಿ ಬೆಳಗಾವಿ ಗಡಿ ವಿವಾದದ ಕುರಿತು ಸಮರ್ಥ ವಾದ ಮಂಡಿಸಲು ಕರ್ನಾಟಕ ಹಾಗೂ ಮಹಾರಾಷ್ಟ್ರ ಸಜ್ಜಾಗಿದೆ. ಇದರ ನಡುವೆ ಮಹಾರಾಷ್ಟದ ಶಿವಸೇನೆ ಕಾರ್ಯಕರ್ತರ ಪುಂಡಾಟ ಹೆಚ್ಚಾಗಿದೆ. ಇಂದು ಕೊಲ್ಲಾಪುರದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಬಸ್ ತಡೆದ ಶಿವಸೇನೆ ಕಾರ್ಯಕರ್ತರು, ಬಸ್‌ಗೆ ಮಸಿ ಬಳಿದಿದ್ದಾರೆ. ಬಸ್ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದಾರೆ. ಬಳಿಕ ಕರ್ನಾಟಕ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇದೀಗ ಬೆಳಗಾವಿಯಲ್ಲಿ ಪರಿಸ್ಥಿತಿ ಉದ್ವಿಘ್ವವಾಗಿದೆ.

Related Video