Asianet Suvarna News Asianet Suvarna News

ಫ್ರೀ ಬಸ್‌ ಹತ್ಕೊಂಡು ಹೆಂಡ್ತಿ ಊರಿಗೋದ್ಲು ಅಂತ, ಬಸ್‌ ಗಾಲಿಗೆ ತಲೆಕೊಟ್ಟ ಪತಿರಾಯ: ಡ್ರೈವರ್‌ ತಬ್ಬಿಬ್ಬು!

ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಬಸ್‌ ಹತ್ತಿಕೊಂಡು ಪ್ರವಾಸಕ್ಕೆ ಹೋದ ತನ್ನ ಪತ್ನಿ ಇನ್ನೂ ಬಂದಿಲ್ಲವೆಂದು ಹೊಸಕೋಟೆಯಲ್ಲಿ ಪತಿರಾಯ ಬಿಎಂಟಿಸಿ ಬಸ್‌ ಗಾಲಿಗೆ ತಲೆಕೊಟ್ಟು ಮಲಗಿದ್ದಾನೆ.

First Published Jun 29, 2023, 4:56 PM IST | Last Updated Jun 29, 2023, 4:56 PM IST

ಬೆಂಗಳೂರು (ಜೂ.29): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಮೊದಲನೇ ಗ್ಯಾರಂಟಿಯಾಗಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುಕೂಲ ಆಗುವಂತೆ ಶಕ್ತಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದರೆ, ಈ ಉಚಿತ ಪ್ರಯಾಣದ ಬಸ್‌ ಹತ್ತಿಕೊಂಡು ಪ್ರವಾಸಕ್ಕೆ ಹೋದ ತನ್ನ ಪತ್ನಿ ಇನ್ನೂ ಬಂದಿಲ್ಲವೆಂದು ಹೊಸಕೋಟೆ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಗಾಲಿಗೆ ತಲೆಕೊಟ್ಟು ಮಲಗಿದ್ದಾನೆ.

ಇದನ್ನು ನೋಡಿ ತಬ್ಬಿಬ್ಬಾದ ಬಸ್‌ ಚಾಲಕ ತಬ್ಬಿಬ್ಬಾಗಿದ್ದಾನೆ. ನಂತರ ಆತನನ್ನು ಮನವೊಲಿಸಿ ಬಸ್‌ ಚಕ್ರದಡಿಯಿಂದ ಹೊರಗೆ ಬರುವಂತೆ ಮನವಿ ಮಾಡಿದರೂ ಬಂದಿಲ್ಲ. ಗಟ್ಟಿಯಾಗಿ ಬಸ್‌ ಚಕ್ರವನ್ನು ಹಿಡಿದುಕೊಂಡು ನನ್ನ ಮೇಲೆ ಬಸ್‌ ಹತ್ತಿಸಿ ಸಾಯಿಸಿ ಎಂದು ಹಠ ಮಾಡಿದ್ದಾನೆ. ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡಿರುವ ಸರ್ಕಾರಕ್ಕೆ ನನ್ನ ಸಾವಿನಿಂದ ಬುದ್ಧಿ ಕಲಿಯಲಿ ಎಂದು ಹೇಳಿದ್ದಾನೆ. ಇನ್ನು ಈ ಘಟನೆ ಬುಧವಾರ ಸಂಜೆ ನಡೆದಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಬಸ್‌ ಸಂಚಾರ ಸ್ಥಗಿತವಾಗಿತ್ತು. ಇನ್ನು ಈ ಬಗ್ಗೆ ಬಸ್‌ ಡ್ರೈವರ್‌ ಪೊಲೀಸರಿಗ ಮಾಹಿತಿ ನೀಡಿದ್ದು, ನಂತರ ಪೊಲೀಸರು ಆತನನ್ನು ಚಕ್ರದಿಂದ ಹೊರಗೆ ಕರೆತಂದಿದ್ದಾರೆ. ಈ ವೇಳೆ ಮದ್ಯಸೇವನೆ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ.

Video Top Stories