ಮಂಗಳವಾರದ ಮೊದಲ ವರದಿಯಲ್ಲಿ ಶತಕ ಬಾರಿಸಿದ ಕೊರೋನಾ: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿ ಇಂದು (ಮಂಗಳವಾರ) ಆರೋಗ್ಯ ಇಲಾಖೆ ಬಿಡುಗಡೆ ಮಾಡುವ ಮೊದಲಾರ್ಧದ ವರದಿಯಲ್ಲಿ ಕೊರೋನಾ ಶತಕ ಬಾರಿಸಿದೆ.

First Published May 26, 2020, 4:40 PM IST | Last Updated May 26, 2020, 4:40 PM IST

ಬೆಂಗಳೂರು, (ಮೇ.26): ರಾಜ್ಯದಲ್ಲಿ ಇಂದು (ಮಂಗಳವಾರ) ಆರೋಗ್ಯ ಇಲಾಖೆ ಬಿಡುಗಡೆ ಮಾಡುವ ಮೊದಲಾರ್ಧದ ವರದಿಯಲ್ಲಿಒಟ್ಟು ನೂರು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

ರಾಜ್ಯದಲ್ಲಿ ಕೊರೋನಾರಹಿತ ಏಕೈಕ ಜಿಲ್ಲೆ, ಸೋಷಿಯಲ್ ಮೀಡಿಯಾ ಸ್ಟೇಟಸ್‌ಗಳು ವೈರಲ್

ರಾಜ್ಯದಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ ಬರೋಬ್ಬರಿ 100 ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2282ಕ್ಕೇರಿಕೆಯಾಗಿದೆ. ಇನ್ನು ಮಂಗಳವಾರ ಸಂಜೆಯ ವರದಿ ಬರಬೇಕಿದೆ.( ದಿನಕ್ಕೆ 2 ಹೆಲ್ತ್ ಬುಲೆಟಿನ್ ಬಿಡುಗಡೆಯಾಗುತ್ತದೆ).