Omicron Variant Threat: ಫ್ರಂಟ್‌ಲೈನ್ ವಾರಿಯರ್ಸ್‌ಗೆ ಬೂಸ್ಟರ್ ಡೋಸ್, ಸುಧಾಕರ್ ಮಾತು

 ಒಮಿಕ್ರಾನ್ ಭೀತಿ ಹಿನ್ನಲೆ (Omicron Threat)  ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಆರೋಗ್ಯ ಸಚಿವ ಡಾ. ಸುಧಾಕರ್ (Dr. Sudhakar) ನೇತೃತ್ವದಲ್ಲಿ ನಿನ್ನೆ ಅಧಿಕಾರಿಗಳ ಸಭೆ ನಡೆದಿದೆ. ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಿದೆ

First Published Dec 1, 2021, 1:38 PM IST | Last Updated Dec 1, 2021, 1:53 PM IST

ಬೆಂಗಳೂರು (ಡಿ. 01):  ಒಮಿಕ್ರಾನ್ ಭೀತಿ ಹಿನ್ನಲೆ (Omicron Threat)  ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಆರೋಗ್ಯ ಸಚಿವ ಡಾ. ಸುಧಾಕರ್ (Dr. Sudhakar) ನೇತೃತ್ವದಲ್ಲಿ ನಿನ್ನೆ ಅಧಿಕಾರಿಗಳ ಸಭೆ ನಡೆದಿದೆ. ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಿದೆ.

Omicron Variant Threat: ಲಾಕ್‌ಡೌನ್ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ

ಆರೋಗ್ಯ ಸಿಬ್ಬಂದಿ, ಫ್ರಂಟ್ ಲೈನ್ ವಾರಿಯರ್ಸ್‌ಗಳು ಎರಡನೇ ಡೋಸ್ ತೆಗೆದುಕೊಂಡು 7-8 ತಿಂಗಳಾಗಿದೆ. ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಇವರಿಗೆ 3 ನೇ ಡೋಸ್/ ಬೂಸ್ಟರ್ ಡೋಸ್  ಕೊಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಈ ಬಗ್ಗೆ ಸಿಎಂ, ಕೇಂದ್ರದ ಜೊತೆ ಚರ್ಚೆ ನಡೆಸಲಿದ್ದಾರೆ. ಒಮಿಕ್ರಾನ್ ಮಣಿಸಲು ಜನರ ಜಾಗ್ರತೆ, ಜಾಗೃತಿ ಎರಡೂ ಬೇಕಾಗುತ್ತದೆ. ಎಲ್ಲರೂ ನಮ್ಮ ಜೊತೆ ಕೈ ಜೋಡಿಸಿ ಎಂದು ಡಾ. ಸುಧಾಕರ್ ಹೇಳಿದ್ದಾರೆ.