Umesh Katti Death ಹುಕ್ಕೇರಿ ಹುಲಿಗೆ ಕಣ್ಣೀರ ವಿದಾಯ, ಹೂಟ್ಟೂರಲ್ಲಿ ಅಂತ್ಯಕ್ರಿಯೆ!

ಹೃದಯಾಘಾತದಿಂದ ನಿಧನರಾದ ಉಮೇಶ್ ಕತ್ತಿ ಇಂದು ತಮ್ಮ ಹುಟ್ಟೂರು ಬೆಳಗಾವಿಯಲ್ಲಿ ಮಣ್ಣಲ್ಲಿ ಮಣ್ಣಾಗಿದ್ದಾರೆ. ಕತ್ತಿ ಅಂತಿಮ ಯಾತ್ರೆ, ಹರ್ಷಾ ಕೊಲೆ ಪ್ರಕರಣದ ಚಾರ್ಜ್ ಶೀಟ್, ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್ ವಿಚಾರಣೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಸಚಿವ ಉಮೇಶ್ ಕತ್ತಿ ಅಕಾಲಿಕ ನಿಧನ ರಾಜ್ಯವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ಬೆಳಗಾವಿ ಅಕ್ಷಕರಶಃ ಆಘಾತಕ್ಕೊಳಗಾಗಿದೆ. ಹೃದಯಾಘಾತಕ್ಕೊಳಗಾದ ಉಮೇಶ್ ಕತ್ತಿ ನಿನ್ನೆ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಇಂದು ಬೆಂಗಳೂರಿಂದ ಪಾರ್ಥವ ಶರೀರವನ್ನು ಕತ್ತಿ ಹುಟ್ಟೂರು ಬೆಳಗಾವಿಗೆ ತರಲಾಗಿತ್ತು. ಜನಸಾಗರವೇ ಹರಿದು ಬಂದಿತ್ತು. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದು ಅಂತ್ಯಕ್ರೆಯಲ್ಲಿ ಪಾಲ್ಗೊಂಡರು. ಉಮೇಶ್ ಕತ್ತಿ ತೋಟದಲ್ಲಿ ಪಾರ್ಥೀವ ಶರೀರವನ್ನು ಸಮಾಧಿ ಮಾಡಲಾಗಿದೆ. ಕತ್ತಿ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video