Asianet Suvarna News Asianet Suvarna News

Rain: ರಾಜ್ಯದಲ್ಲಿ ಮತ್ತೆ ಮಹಾ ಮಳೆ ಸಾಧ್ಯತೆ, ಹವಾಮಾನ ಇಲಾಖೆ ಎಚ್ಚರಿಕೆ

Nov 28, 2021, 3:16 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ನ. 28): ರಾಜ್ಯದಲ್ಲಿ ಕೊಂಚ ಬ್ರೇಕ್ ಕೊಟ್ಟಿದ್ದ ವರುಣದೇವ, ಮತ್ತೆ ಅಬ್ಬರಿಸಲಿದ್ದಾನೆ. ಅದರ ಸೂಚನೆ ಚೆನ್ನೈನಲ್ಲಿ (Chennai) ಈಗಾಗಲೇ ಸಿಕ್ಕಿದೆ. ಬಂಗಾಳಕೊಲ್ಲಿಯಲ್ಲಿ ಎದ್ದ ತೂಫಾನ್ ಚಂಡಮಾರುತ (Cyclone) ಚೆನ್ನೈನಲ್ಲಿ ಅವಾಂತರವನ್ನು ಸೃಷ್ಟಿಸಿದೆ. 

Chamarajnagar: ಕೊಚ್ಚಿ ಹೋದ ಸೇತುವೆ, ಶಾಲಾ-ಮಕ್ಕಳ ಪರದಾಟ

ಕಳೆದ ನಾಲ್ಕು ದಿನಗಳಿಂದ ಮತ್ತೆ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ ತಮಿಳುನಾಡು ಪುನಃ ಅಕ್ಷರಶಃ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಈವರೆಗೆ ಮಾನ್ಸೂನ್‌ ವೇಳೆ ಆಗಬೇಕಾದ ಸಾಮಾನ್ಯಕ್ಕಿಂತ ಶೇ.75  ರಷ್ಟುಹೆಚ್ಚುವರಿ ಮಳೆಯಾಗಿದ್ದು, 3 ದಿನದಲ್ಲಿ 5 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ ಕರಾವಳಿ ಭಾಗಗಳಲ್ಲಿ ನ.29ರವರೆಗೆ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನಚ್ಚರಿಕೆ ನೀಡಿದೆ.