ಮಾರ್ಚ್ 1 ರಿಂದ ಸರ್ಕಾರಿ ನೌಕರರ ಮುಷ್ಕರ, ನಾಳೆಯಿಂದ ಯಾವ ಕೆಲಸವೂ ನಡೆಯುವುದಿಲ್ಲ!
ಹಲವು ಬೇಡಿಕೆಗಳ ಆಗ್ರಹಿಸಿ ಸರ್ಕಾರಿ ನೌಕರರ ಮುಷ್ಕರ ನಾಳೆಯಿಂದ ಆರಂಭ, ರೇವಣ್ಣ ವಿರುದ್ಧ ಅರಕಲಗೂಡು ಜೆಡಿಎಸ್ ಶಾಸಕ ಗರಂ, ರಾಜಕೀಯ ನಿವೃತ್ತಿ ವಿಷಯ ತಿಳಿದು ತನ್ವೀರ್ ಸೇಠ್ ಮನೆ ಎದುರು ಹೈಡ್ರಾಮ, ರಾಜ್ಯ ನಾಯಕರಿಗೆ ಕಾಂಗ್ರೆಸ್ ಅವಮಾನ, ಮೋದಿ ಸೂಚಿಸಿದ ಇತಿಹಾಸವೇನು? ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
7ನೇ ವೇತನ ಆಯೋಗ ಜಾರಿಗೊಳಿಸಲು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಮುಷ್ಕರ ಹಮ್ಮಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ, ಗ್ರಾಮ ಪಂಚಾಯಿತ್, ಆರೋಗ್ಯ ಸೇರಿದಂತೆ ಸರ್ಕಾರದ ಎಲ್ಲಾ ನೌಕರರು ಅನಿರ್ದಿಷ್ಟಾವದಿ ಮುಷ್ಕರ ಘೋಷಿಸಿದ್ದಾರೆ. ಸರ್ಕಾರ ನೀಡಿರುವ ಗಡು ಮುಗಿದು 9 ತಿಂಗಳು ಮುಗಿದಿದೆ.ಹೀಗಾಗಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ನೌಕರರ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.ವೇತನ ಭತ್ಯೆಗಳ ಪರಿಷ್ಕರಣೆ, ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗುವ ಮೂಲಕ ಮಾ.1ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ. ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ರಾಜ್ಯವ್ಯಾಪಿ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ.ಇತ್ತ ಮುಷ್ಕರ ಘೋಷಿರುವ ನೌಕರರ ಜೊತೆ ಸಂಧಾನ ಮಾತುಕತೆ ಮಾಡುವ ಹಲವು ಪ್ರಯತ್ನವನ್ನು ಸರ್ಕಾರ ಮಾಡಿದೆ. ಆದರೆ ಯಾವೂದು ಫಲಪ್ರದಗೊಂಡಿಲ್ಲ. ಮುಷ್ಕರಿಂದ ಯಾವ ಸೇವೆಗಳು ಬಂದ್ ಆಗಲಿವೆ? ಈ ಎಲ್ಲಾ ಮಾಹಿತಿ ಇಲ್ಲಿದೆ.