Karnataka Nada Devate: ಸರ್ಕಾರದಿಂದ ಅಧಿಕೃತ 'ನಾಡದೇವಿಯ' ಚಿತ್ರ

Karnataka Nada Devate Photo: ನಾಡದೇವಿಯ ಕಳೆದ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇಮಿಸಿದ್ದ ಐವರು ಸದಸ್ಯರ ತಜ್ಞರ ಸಮಿತಿಯ ಶಿಫಾರಸ್ಸಿನ ಮೇರೆಗೆ ಖ್ಯಾತ ಕಲಾವಿದ ಕೆ.ಸೋಮಶೇಖರ್ ಅವರು ಬಿಡಿಸಿದ ಭಾವಚಿತ್ರವನ್ನು ನಾಡ ದೇವತೆ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ

First Published Nov 23, 2022, 5:19 PM IST | Last Updated Nov 23, 2022, 5:19 PM IST

ಬೆಂಗಳೂರು (ನ. 23): ಕರ್ನಾಟಕ ಸರ್ಕಾರದಿಂದ ಅಧಿಕೃತಗೊಳ್ಳಲು ನಾಡದೇವಿಯ ಚಿತ್ರವು ಸಿದ್ಧವಾಗಿದೆ. ಕಳೆದ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇಮಿಸಿದ್ದ ಐವರು ಸದಸ್ಯರ ತಜ್ಞರ ಸಮಿತಿಯ ಶಿಫಾರಸ್ಸಿನ ಮೇರೆಗೆ ಖ್ಯಾತ ಕಲಾವಿದ ಕೆ.ಸೋಮಶೇಖರ್ ಅವರು ಬಿಡಿಸಿದ ಭಾವಚಿತ್ರವನ್ನು ನಾಡ ದೇವತೆ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ. ರಾಜ್ಯದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಭಾಷಾ ವಿಶಿಷ್ಟತೆಯನ್ನು ಒಳಗೊಂಡಿರುವ ಕರ್ನಾಟಕದ ಭೂಪಟದ ಹಿನ್ನೆಲೆಯಲ್ಲಿ ಭುವನೇಶ್ವರಿ ದೇವಿಯನ್ನು ಚಿತ್ರಿಸುವ ತೈಲವರ್ಣದ ಭಾವಚಿತ್ರವನ್ನು ದೇವಿಯ ಅಧಿಕೃತ ಭಾವಚಿತ್ರವಾಗಿ ಬಳಸಲಾಗುತ್ತಿದೆ. 

ಮೂಲಗಳ ಪ್ರಕಾರ ಇತಿಹಾಸದ ಕಾಲದಿಂದ ಇಂದಿನವರೆಗೆ ಕರ್ನಾಟಕದ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಭಾವಚಿತ್ರವನ್ನು ಬಿಡಿಸಲಾಗಿದೆ. ದೇವಿಯ ಚಿತ್ರಣದಲ್ಲಿ ಏಕರೂಪತೆಯ ಬೇಡಿಕೆಗೆ ಅನುಗುಣವಾಗಿ,  ಸೋಮಶೇಖರ್ ಅವರ ಭಾವಚಿತ್ರವನ್ನು ತಜ್ಞರ ಸಮಿತಿ ಶಿಫಾರಸು ಮಾಡಿದ್ದು, ಭಾವಚಿತ್ರವು ಪಶ್ಚಿಮ ಘಟ್ಟಗಳ ಶ್ರೀಮಂತ ನೈಸರ್ಗಿಕ ಸಂಪತ್ತನ್ನು ಪ್ರದರ್ಶಿಸುವ ಕರ್ನಾಟಕದ ಭೂಪಟದ ಹಿನ್ನೆಲೆಯಲ್ಲಿ ದೇವತೆ ಕುಳಿತಿರುವುದನ್ನು ತೋರಿಸುತ್ತದೆ.

ದೇವಿಯು ದೈವತ್ವದ ಸ್ಪರ್ಶ: ಬಲಗೈ 'ಅಭಯ ಹಸ್ತ' ಭರವಸೆ ಮತ್ತು ಆಶೀರ್ವಾದವನ್ನು ನೀಡಿದರೆ, ದೇವಿಯು ರಾಜ್ಯದ ಭಾಷಾ ಇತಿಹಾಸವನ್ನು ಸೂಚಿಸುವ ತಾಳೆ ಎಲೆಗಳ ಮೇಲೆ ಕನ್ನಡ ಗ್ರಂಥಗಳನ್ನು ಹಿಡಿದಿದ್ದಾಳೆ. ಹಿನ್ನಲೆಯಲ್ಲಿ ಕನ್ನಡ ಧ್ವಜವೊಂದು ಕನ್ನಡಾಭಿಮಾನವನ್ನು ಬಿಂಬಿಸುತ್ತದೆ. ಹಸಿರು ಸೀರೆಯು ರಾಜ್ಯದ ಹಸಿರು ಸಂಪತ್ತನ್ನು ಹೇಳುತ್ತದೆ. ಪ್ರತಿಯೊಂದು ಆಭರಣದಲ್ಲಿ ಪ್ರತಿ ಕನ್ನಡ ಸಾಮ್ರಾಜ್ಯದ ಅವಧಿಯಲ್ಲಿ ಚಾಲ್ತಿಯಲ್ಲಿರುವ ಸಂಸ್ಕೃತಿಯನ್ನು ಚಿತ್ರಿಸಲಾಗಿದೆ ಎಂದು ಚಿತ್ರಕಲಾವಿದ ಸೋಮಶೇಖರ್ ತಿಳಿಸಿದ್ದಾರೆ. 

Video Top Stories