ರೈತರ ಜಮೀನು, ಮಠದ ಭೂಮಿ ಮೇಲೆ ವಕ್ಫ್ ಕಣ್ಣು, ಕರ್ನಾಟಕದಲ್ಲಿ ತೀವ್ರಗೊಂಡ ಹೋರಾಟ!
ಕರ್ನಾಟಕದಲ್ಲಿ ಇದೀಗ ವಕ್ಫ್ ಬೋರ್ಡ್ ಭೂದಾಹಕ್ಕೆ ರೈತರು ಜಮೀನು ಬಲಿಯಾಗಿದೆ. ಏಕಾಏಕಿ ಬಂದಿರುವ ನೋಟಿಸ್‌ನಿಂದ ವಿಜಯಪುರ ಜಿಲ್ಲೆ ರೈತರು ಕಂಗಾಲಾಗಿದ್ದರೆ. ಕರಾಳ ದೀಪಾವಳಿ ಮೂಲಕ ಪ್ರತಿಭಟನೆ ಆರಂಭಿಸಿದ್ದರೆ. ಇತ್ತ ವಿಪಕ್ಷ ಕೂಡ ಹೋರಾಟ ನಡೆಸುತ್ತಿದೆ. ಇದರ ನಡುವೆ ಸರ್ಕಾರ ಹೇಳುತ್ತಿರುವುದೇನು?
ವಕ್ಫ್ ಬೋರ್ಡ್ ಅನ್ನೋ ಹೆಸರೇ ಕೇಳದಿದ್ದ ರೈತರು ಈಗ ದಿಕ್ಕೆಟ್ಟು ಕೂತಿದ್ದಾರೆ..ಜಿಲ್ಲೆಯಿಂದ ಜಿಲ್ಲೆಗೆ ವಕ್ಫ್ ಆಸ್ತಿ ವಿವಾದದ ಕಾಳ್ಗಿಚ್ಚು ಹಬ್ಬುತ್ತಲೇ ಇದೆ.. ವಕ್ಫ್ ಬೋರ್ಡಿನ ಭೂದಾಹಕ್ಕೆ ರೈತರ ರೋಷಾಗ್ನಿ ಹೊತ್ತಿಕೊಂಡಿದೆ.. ಸರ್ಕಾರದ ವಿರುದ್ಧ ವಿಪಕ್ಷ ಮುಗಿಬಿದ್ದಿದೆ. ಒಂದು ಕಡೆ ರೈತರ ಜಮೀನು.. ಮತ್ತೊಂದು ಕಡೆ ಮಠದ ಭೂಮಿ.. ಇನ್ನೊಂದು ಕಡೆ ದಲಿತರ ನೆಲ.. ಇದೆಲ್ಲದರ ಮೇಲೂ ವಕ್ಫ್ ಬೋರ್ಡ್ ಕಣ್ಣಿಟ್ಟಿದೆ. ಒಂದೆಡೆ ರೈತರ ಪ್ರತಿಭಟನೆ, ಮತ್ತೊಂದೆಡೆ ವಿಪಕ್ಷಗಳ ಹೋರಾಟ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.