ಮುಡಾ ಬಳಿಕ ಅಬಕಾರಿ ಇಲಾಖೆಯಲ್ಲಿ 18 ಕೋಟಿ ರೂ ಹಗರಣ, ಕಾಂಗ್ರೆಸ್ ಸರ್ಕಾರಕ್ಕೆ ಸಂಕಷ್ಟ!

18 ಅಲ್ಲಾ, ನೂರಾರು ಕೋಟಿ ರೂಪಾಯಿ ಹಗರಣ ಅಬಕಾರಿ ಇಲಾಖೆಯಲ್ಲಿ ನಡೆದಿದೆ, ಮದ್ಯ ಮಾರಾಟ ಸಂಘದ ಗಂಭೀರ ಆರೋಪ, 500 ವರ್ಷದ ಹಳೇಯ ಅನ್ನದಾನೇಶ್ವರ ಮಠ ಈಗ ವಕ್ಫ್ ಆಸ್ತಿ, ನಾಳೆ ಲೋಕಾಯುಕ್ತ ಪೊಲೀಸರ ಮುಂದೆ ಸಿದ್ದರಾಮಯ್ಯ ಹಾಜರ್ ಸೇರಿದಂತೆ ಇಂದಿನ ಇಡೀ ದಿನದ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ. ಸಾಮಾಜಿಕ ಕಾರ್ಯಕರ್ತ ಅಜಿತ್ ಸಲ್ಲಿಸಿದ ದೂರು ಇದೀಗ ಕೋಲಾಹಲ ಸೃಷ್ಟಿಯಾಗಿದೆ. ಪಿಎಸ್ಐ, ಅಬಕಾರಿ ಡಿವೈಎಸ್‌ಪಿ ಸೇರಿದಂತೆ ಹಲವರ ವರ್ಗಾವಣೆಗೆ ಒಂದೇ ದಿನದಲ್ಲಿ 18 ಕೋಟಿ ರೂಪಾಯಿ ಎತ್ತಲಾಗಿದೆ ಅನ್ನೋ ವಿವರವಾದ ದೂರು ರಾಜ್ಯಪಾಲರಿಗೆ ನೀಡಲಾಗಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣ ಬಳಿಕ ಇದೀಗ ಅಬಕಾರಿ ಇಲಾಖೆಯಲ್ಲಿ ಕೋಟಿ ಕೋಟಿ ರೂಪಾಯಿ ಹಗರಣದ ಆರೋಪ ಕೇಳಿಬಂದಿದೆ.

Related Video