Mekedatu Project: 10 ಜಿಲ್ಲೆ, 87 ಅಖಾಡ, 163 ಕಿಮೀ, ಏನಿದು ಡಿಕೆಶಿ ಮೇಕೆದಾಟು ಲೆಕ್ಕಾಚಾರ.?

ಮೇಕೆದಾಟು (Mekedatu) ನೀರಾವರಿ ಯೋಜನೆಯನ್ನು (Project) ಸರಕಾರ ಶೀಘ್ರವಾಗಿ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿ ಜ.9ರಿಂದ 19 ರವರೆಗೆ ಕಾಂಗ್ರೆಸ್‌ (Congress) ಪಕ್ಷದಿಂದ ಪಾದಯಾತ್ರೆ (March) ಹಮ್ಮಿಕೊಳ್ಳಲಾಗಿದೆ. 

First Published Dec 29, 2021, 5:20 PM IST | Last Updated Dec 29, 2021, 5:20 PM IST

ಬೆಂಗಳೂರು (ಡಿ. 29): ಮೇಕೆದಾಟು (Mekedatu) ನೀರಾವರಿ ಯೋಜನೆಯನ್ನು (Project) ಸರಕಾರ ಶೀಘ್ರವಾಗಿ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿ ಜ.9ರಿಂದ 19 ರವರೆಗೆ ಕಾಂಗ್ರೆಸ್‌ (Congress) ಪಕ್ಷದಿಂದ ಪಾದಯಾತ್ರೆ (March) ಹಮ್ಮಿಕೊಳ್ಳಲಾಗಿದೆ. 

ಮೇಕೆದಾಟು ಯೋಜನೆ ವಿಚಾರವಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ಕಾಂಗ್ರೆಸ್‌ (Congress) ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಮೇಕೆದಾಟು ಯೋಜನೆ ಹೋರಾಟವನ್ನು ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಕಾಂಗ್ರೆಸ್‌ ಹೈಜಾಕ್‌ ಮಾಡುತ್ತಿದೆ. ಜನರನ್ನು ಮರುಳು ಮಾಡಲು ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್‌ ನಾಯಕರು ಪಾದ​ಯಾತ್ರೆ ಹೊರ​ಟಿ​ದ್ದಾರೆ. ಜೆಡಿಎಸ್‌ ಕೊಟ್ಟನೀರಾ​ವರಿ ಯೋಜ​ನೆ​ಗ​ಳಿಗೂ ಕಾಂಗ್ರೆಸ್‌ನ ಬೂಟಾಟಿಕೆಗೂ ಸಾಕಷ್ಟುವ್ಯತ್ಯಾಸವಿದೆ. ಕಾಂಗ್ರೆಸ್‌ನವರು ಈಗ ಆ ಯೋಜನೆಯನ್ನು ಹೈಜಾಕ್‌ ಮಾಡಿ​ ತರಾ​ತು​ರಿ​ಯಲ್ಲಿ ಪಾದ​ಯಾತ್ರೆ ಹಮ್ಮಿ​ಕೊಂಡಿದ್ದಾರೆ. ಹಾಗೆ ನೋಡಿದರೆ ಈ ವಿಚಾರವಾಗಿ ಪಾದ​ಯಾತ್ರೆ ಆರಂಭ​ವಾ​ಗಿದ್ದೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇ​ಗೌ​ಡ​ರಿಂದ' (HD Devegowda) ಎಂದಿದ್ದಾರೆ. 

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್‌ ನಡೆಸುತ್ತಿರುವ ಪಾದಯಾತ್ರೆ ಪಕ್ಷಾತೀತ ಹೋರಾಟವಾಗಿದ್ದು, ಇದರಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಪಾಲ್ಗೊಳ್ಳಬಹುದು ಎಂದು ಡಿ.ಕೆ.ಶಿವಕುಮಾರ್‌ ಬಹಿರಂಗವಾಗಿ ಆಹ್ವಾನ ನೀಡಿದರು.