ಲೋಕಸಭೆಯಲ್ಲಿ ಬೆಳಗಾವಿ ಗಡಿ ವಿವಾದ, ಬೊಮ್ಮಾಯಿ ಮೇಲೆ ಪ್ರಚೋದನೆ ಆರೋಪ ಹೊರಿಸಿದ ಶಿವಸೇನೆ!

ಬೆಳಗಾವಿ ಗಡಿ ಗಲಾಟೆ ಮತ್ತೆ ಲೋಕಸಭೆಯಲ್ಲಿ ಸದ್ದು ಮಾಡಿದೆ. ಈ ಬಾರಿ ಶಿವಸೇನೆ ಸಂಸದ ಲೋಕಸಭೆಯಲ್ಲಿ ಗಡಿ ವಿಚಾರ ಪ್ರಸ್ತಾಪಿಸಿ, ಕರ್ನಾಟಕದ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ನವದೆಹಲಿ(ಡಿ.09): ಲೋಕಸಭೆಯಲ್ಲಿ ಮತ್ತೆ ಬೆಳವಾಗಿ ಗಡಿ ವಿವಾದ ಪ್ರಸ್ತಾಪವಾಗಿದೆ. ಶಿವಸೇನೆ ಸಂಸದ ದರ್ಶಶೀಲ್ ಮಾನೆ ಹೊಸ ವಾದ ಮುಂದಿಟ್ಟಿದ್ದಾರೆ. ಬೆಳಗಾವಿ ಗಡಿಯಲ್ಲಿನ ಗಲಾಟೆಗೆ ಕರ್ನಾಟಕ ಸಿಎಂ ಬೊಮ್ಮಾಯಿ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಆರೋಪ ಹೊರಿಸಿದ್ದಾರೆ. ಕೇಂದ್ರ ಮಧ್ಯಪ್ರವೇಶಿಸಿ ಶೀಘ್ರವೇ ಗಡಿ ಸಮಸ್ಯೆ ಬಗೆಹರಿಸಲು ಆಗ್ರಹಿಸಿದ್ದಾರೆ. ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ, ಮರಾಠಿಗರ ವಾಹನಗಳನ್ನು ಜಖಂಗೊಳಿಸುತ್ತಿದ್ದಾರೆ. ಇದರಿಂದ ಗಡಿಯಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.

Related Video