Asianet Suvarna News Asianet Suvarna News

ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಮಣ್ಣು ಉಳಿಸಿ' ಸಮಾವೇಶ

ಈಶ ಫೌಂಡೇಶನ್‌ನ ಸದ್ಗುರು ವಾಸುದೇವ್ ನೇತೃತ್ವದಲ್ಲಿ 'ಮಣ್ಣು ಉಳಿಸಿ' (Save Soil) ಅಭಿಯಾನ ಅರಮನೆ ಮೈದಾನದಲ್ಲಿಂದು ನೆರವೇರಿತು. 

ಬೆಂಗಳೂರು (ಜೂ. 19): ಈಶ ಫೌಂಡೇಶನ್‌ನ (Isha Foundation)  ಸದ್ಗುರು ವಾಸುದೇವ್ ನೇತೃತ್ವದಲ್ಲಿ 'ಮಣ್ಣು ಉಳಿಸಿ' (Save Soil) ಅಭಿಯಾನ ಅರಮನೆ ಮೈದಾನದಲ್ಲಿಂದು ನೆರವೇರಿತು. ಅಭಿಯಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ವೈ, ಅರೋಗ್ಯ ಸಚಿವ ಡಾ. ಸುಧಾಕರ್ ಸೇರಿದಂತೆ ಗಣ್ಯರು ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಮಣ್ಣು ಉಳಿಸಿ ಅಭಿಯಾನಕ್ಕೆ ಬೆಂಬಲ ಸೂಚಿಸಿದೆ. 

ಬೆಂಗಳೂರು ಅರಮನೆ ಮೈದಾನದಲ್ಲಿ 'ಮಣ್ಣು ಉಳಿಸಿ' ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಅಭಿಯಾನದ ಭಾಗವಾಗಿ ಮಾರ್ಚ್ 21ರಂದು ಯೂರೋಪ್‌ನಿಂದ ಬೈಕ್‌ ಯಾತ್ರೆ ಆರಂಭಿಸಿದ್ದು, ಬೆಂಗಳೂರಿಗೆ ತಲುಪಿ 27298 ಕಿ.ಮೀ ಪೂರ್ಣಗೊಂಡಿದೆ. ಯುರೋಪ್‌, ಮಧ್ಯಏಷ್ಯಾದ 27 ದೇಶಗಳು, ಭಾರತದ 9 ರಾಜ್ಯಗಳಿಗೆ ತೆರಳಿ ಅಲ್ಲಿನ ಸರ್ಕಾರಗಳಿಗೆ ಮಣ್ಣಿನ ಅಧ್ಯಯನದ ವರದಿ ನೀಡಿ, ಮಣ್ಣನ್ನು ಉಳಿಸಲು ಕೈಗೊಳ್ಳಬೇಕಾದ ಕಾರ್ಯನೀತಿಯನ್ನು ನೀಡಲಾಗಿದೆ. ಹಲವು ದೇಶಗಳಿಗೆ ಕಾರ್ಯನೀತಿಯನ್ನು ಆನ್‌ಲೈನ್‌ ಮೂಲಕ ತಲುಪಿಸಲಾಗಿದೆ. ಈವರೆಗೂ 74 ದೇಶಗಳು, ಭಾರತದ 9 ರಾಜ್ಯಗಳು ಮಣ್ಣನ್ನು ಉಳಿಸುವ ಕ್ರಮಗಳನ್ನು ಕೈಗೊಳ್ಳಲು ಒಪ್ಪಿವೆ. 
 

Video Top Stories