ಸಾಹುಕಾರ್‌ಗೆ ಬಿಗ್ ಶಾಕ್, ತಿರುಗಿ ಬಿದ್ದ ಸೀಡಿ ಯುವತಿಯಿಂದ ದೂರು!

ಸೀಡಿ ಲೇಡಿ ಮೂರನೇ ವಿಡಿಯೋ ರಿಲೀಸ್ ಮಾಡಿ, ತಾನು ಇಂದು(ಶುಕ್ರವಾರ) ಮಧ್ಯಾಹ್ನ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುವುದಾಗಿ ತಿಳಿಸಿದ್ದಾರೆ. ಇದು ಬೆಳಗಾವಿಯ ಸಾಹುಕಾರ್‌ಗೆ ಬಿಗ್ ಶಾಕ್ ನೀಡಿದೆ.

First Published Mar 26, 2021, 12:48 PM IST | Last Updated Mar 26, 2021, 1:45 PM IST

ಬೆಂಗಳೂರು(ಮಾ.26): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಒಂದೆಡೆ ಸಾಹುಕಾರ್ ವಿಡಿಯೋದಲ್ಲಿರುವುದು ತಾವಲ್ಲ, ತನ್ನ ವಿರುದ್ಧ ನಡೆದ ಷಡ್ಯಂತ್ರ ಎನ್ನುತ್ತಿದ್ದಾರೆ. ಇತ್ತ ಮತ್ತೊಂದೆಡೆ ಸಿಡಿ ಗ್ಯಾಂಗ್ ಕೂಡಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಇವೆಲ್ಲದರ ನಡುವೆಯೇ ಸಿಡಿಯಲ್ಲಿದ್ದ ಯುವತಿ ಎರಡು ಬಾರಿ ವಿಡಿಯೋ ರಿಲೀಸ್ ಮಾಡಿ ಸಂಚಲನ ಮೂಡಿಸಿದ್ದರು. ಆದರೀಗ ಮೂರನೇ ವಿಡಿಯೋ ರಿಲೀಸ್ ಮಾಡಿ, ತಾನು ಇಂದು(ಶುಕ್ರವಾರ) ಮಧ್ಯಾಹ್ನ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುವುದಾಗಿ ತಿಳಿಸಿದ್ದಾರೆ. ಇದು ಬೆಳಗಾವಿಯ ಸಾಹುಕಾರ್‌ಗೆ ಬಿಗ್ ಶಾಕ್ ನೀಡಿದೆ.

SIT ಗೆ ಹೊಸ ನಂಬರ್ ಕೊಟ್ಟು ಯಾಮಾರಿಸಿದ್ರಾ ಜಾರಕಿಹೊಳಿ...?

ಹೌದು ಸೋಶಿಯಲ್ ಮಿಡಿಯಾದಲ್ಲಿ ಮೂರನೇ ಬಾರಿ ವಿಡಿಯೋ ಮೂಲಕ ಕಾಣಿಸಿಕೊಂಡಿರುವ ಯುವತಿ ತಾನು ಅಜ್ಞಾತವಾಸ ಮುಗಿಸಿ ಪೊಲೀಸರೆದುರು ಹಾಜರಾಗುತ್ತೇನೆ. ರಮೇಶ್ ಜಾರಕಿಹೊಳಿ ವಿರುದ್ಧ ವಕೀಲ ಜಗದೀಶ್ ಮೂಲಕ ಇವತ್ತು ಮಧ್ಯಾಹ್ನ ಎರಡು ಗಂಟೆಗೆ ದೂರು ನೀಡುತ್ತೇನೆ. 24 ದಿನದಿಂದ ಜೀವ ಭಯದಿಂದ ಬದುಕುತ್ತಿದ್ದೆ.  ಆದರೀಗ ಎಲ್ಲೋ ಒಂದು ಕಡೆ ಧೈರ್ಯ ಬಂದಿದೆ ಎಂದಿದ್ದಾರೆ.

2ನೇ ವಿಡಿಯೋ ರಿಲೀಸ್ ಮಾಡಿ ಪೊಲೀಸರಿಗೆ ಪ್ರಶ್ನೆ; ಹೊಸ ವರಸೆ ತೆಗೆದೆ CD ಯುವತಿ!

ಸದ್ಯ ಜಾರಕಿಹೊಳಿ ವಿರುದ್ಧವೇ ತಿರುಗಿ ಬಿದ್ದಿರುವ ಸೀಡಿ ಯುವತಿ, ದೂರಿನ ಪ್ರತಿ ಬರೆಯುತ್ತಿರುವ ಫೋಟೋ ಕೂಡಾ ಲಭ್ಯವಾಗಿದೆ. ಅದೇನಿದ್ದರೂ ಸದ್ಯ ಕಳೆದ ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿರುವ ಈ ಹೈಡ್ರಾಮಾ ಇಂದು ತಾರ್ಕಿಕ ಅಂತ್ಯ ಕಾಣುತ್ತಾ ಅಥವಾ ಸಿಡಿ ಗ್ಯಾಂಗ್ ಹಾಗೂ ಯುವತಿ ತಮ್ಮ ಅಜ್ಞಾತವಾಸ ಮುಂದುವರೆಸುತ್ತಾರಾ ಎಂಬುವುದಕ್ಕೆ ಇಂದು ಮಧ್ಯಾಹ್ನ ಉತ್ತರ ಸಿಗಲಿದೆ.