ರಾಜ್ಯ ಸರ್ಕಾರದ ಜಾತಿ ಗಣತಿ ವರದಿ ಬಹಿರಂಗ, ಯಾವ ಸಮುದಾಯ ಸಂಖ್ಯೆ ಎಷ್ಟಿದೆ?
ಕಾಂಗ್ರೆಸ್ ಜಾತಿ ಗಣತಿ ವರದಿಗೆ ಸಂಪುಟ ಅನುಮೋದನೆ, ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ, ಜೆಡಿಎಸ್ ಜನಾಂದೋಲನ, ಯತ್ನಾಳ್ ವಿರುದ್ಧ ಮುಸ್ಲಿಮ್ ಸಮುದಾಯದ ಹೋರಾಟ, ಪ್ರಕರಣಕ್ಕೆ ಟ್ವಿಸ್ಟ್, ವಿನಯ್ ಸೋಮಯ್ಯ ಪ್ರಕರಣದಲ್ಲಿ ಅನುಮಾನ ಹೆಚ್ಚಿಸಿದ ಪೊಲೀಸರ ನಡೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಜಾತಿ ಗಣತಿ ವರದಿ ಇದೀಗ ಸಚಿವರ ಕೈಸೇರಿದೆ. ಇದರ ಬೆನ್ನಲ್ಲೇ ವರದಿ ಬಹಿರಂಗವಾಗಿದೆ. ಕರ್ನಾಟಕದಲ್ಲಿರುವ ಸಮುದಾಯಗಳ ಜನಸಂಖ್ಯೆ, ಅವರಿಗೆ ನೀಡಿರುವ ಮೀಸಲಾತಿ, ಸಮಿತಿ ಶಿಫಾರಸ್ಸು ಮಾಡಿರುವ ಮೀಸಲಾತಿ ಪ್ರಮಾಣ ಸೇರಿದಂತೆ ಎಲ್ಲಾ ಮಾಹಿತಿಗಳು ಬಹಿರಂಗವಾಗಿದೆ. ಈ ವರದಿಯಲ್ಲಿ ಯಾವ ಸಮುದಾಯ ಎಷ್ಟೆಷ್ಟು ಅನ್ನೋ ಮಾಹಿತಿ ಬಯಲಾಗಿದೆ.