News Hour: ಜಾತಿಗಣತಿ ಸ್ವೀಕಾರ.. ‘ಕೈ’ನಲ್ಲೇ ಕಿಚ್ಚು!

ಭಾರೀ ವಿರೋಧದ ನಡುವೆಯೇ ಜಾತಿ ಗಣತಿಯನ್ನು ರಾಜ್ಯ ಸರ್ಕಾರ ಸ್ವೀಕಾರ ಮಾಡಿದೆ. ಗುರುವಾರ ವಿಧಾನಸಭೆಯಲ್ಲಿಯೇ ಸಿಎಂ ಸಿದ್ಧರಾಮಯ್ಯ ಈ ವರದಿಯನ್ನು ಸ್ವೀಕರಿಸಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ.29): ವಿರೋಧದ ಮಧ್ಯೆಯೇ ಜಾತಿಗಣತಿ ಸ್ವೀಕಾರವಾಗಿದೆ.. ಸಿಎಂ ಸಿದ್ದರಾಮಯ್ಯಗೆ ಜಯಪ್ರಕಾಶ್ ಹೆಗ್ಡೆ ವರದಿ ಹಸ್ತಾಂತರಿಸಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ವರದಿ ಬಹಿರಂಗವಾಗೋದು ಅನುಮಾನ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಿಂಗಾಯತ,ಒಕ್ಕಲಿಗರ ವಿರೋಧ ನಡುವೆ ವರದಿ ಸ್ವೀಕಾರ ಮಾಡಲಾಗಿದೆ. ಈ ಹಿಂದೆ ವರದಿ ವಿರೋಧಿಸಿ ಒಕ್ಕಲಿಗ ನಾಯಕರ ಪತ್ರ ಸಮರ ನಡೆದಿತ್ತು. ಲಿಂಗಾಯತರ ಶಾಸಕರಿಂದಲೂ ಜಾತಿಗಣತಿಗೆ ವಿರೋಧ ವ್ಯಕ್ತವಾಗಿತ್ತು. ಪ್ರತಿ ಜಿಲ್ಲೆಗೆ ಒಂದರಂತೆ 1 ಪುಸ್ತಕದಲ್ಲಿ ಸರ್ಕಾರಕ್ಕೆ ವರದಿ ಇದೆ.

ಜಾತಿ ಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ; 2 ಮೂಟೆಗಳಲ್ಲಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗಡೆ

30 ಜಿಲ್ಲೆಗಳಿಗೆ 30 ಪುಸ್ತಕಗಳಲ್ಲಿ ಜಾತಿಗಣತಿ ರಿಪೋರ್ಟ್​. ಜಾತಿಗಣತಿ ವರದಿಯಲ್ಲಿ ಜಾತಿವಾರು ಜನಸಂಖ್ಯೆ ವಿವರ ನೀಡಲಾಗಿದೆ. ಜಾತಿ/ವರ್ಗಗಳ ಲಕ್ಷಣಗಳು, SC-ST ಜಾತಿ ವರ್ಗಗಳು . ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿ ಅಂಶಗಳ ಮಾಹಿತಿ ಇದೆ. ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ.

Related Video