ಮಹಿಳೆಯರಿಗ ಉಚಿತ ಗ್ಯಾರೆಂಟಿ, ಪುರುಷರ ಮೇಲೆ 15 ಪರ್ಸೆಂಟ್ ಟಿಕೆಟ್ ದರ ಹೆಚ್ಚಳ
ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ಬಸ್ ಫ್ರೀ ಮಾಡಿದೆ. ಆದರೆ ಇದರ ಹೊರೆಯನ್ನು ಪುರುಷರ ಮೇಲೆ ಹಾಕುತ್ತಿದೆಯಾ ಸರ್ಕಾರ? ಇದೀಗ ಬಸ್ ದರ ಶೇಕಡಾ 15ರಷ್ಟು ಹೆಚ್ಚಿಸಲು ಮುಂದಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಸ್ಪಷ್ಟ ಕಾರಣವನ್ನು ಬಿಚ್ಚಿಟ್ಟಿದೆ.
ಬೆಂಗಳೂರು(ಜ.02) ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಶೇಕಡಾ 15 ರಷ್ಟು ಬಸ್ ಟಿಕೆಟ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದು ಕಾಂಗ್ರೆಸ್ ಉಚಿತ ಗ್ಯಾರೆಂಟಿಯ ಹೊಡೆತ ಅನ್ನೋ ವಿವಾದ ಶುರುವಾಗಿದೆ. ಆದರೆ ಈ ಕುರಿತು ಸ್ಪಷ್ಟೆ ನೀಡಿರುವ ರಾಜ್ಯ ಸರ್ಕಾರ, 2015ರ ಬಳಿಕ ಇದೀಗ ದರ ಏರಿಕೆ ಮಾಡಲಾಗುತ್ತಿದೆ. ಅಂದು ಡೀಸೆಲ್ ಬೆಲೆ, ಉದ್ಯೋಗಿಗಳ ವೇತನ ಸೇರಿದಂತೆ ಇತರ ಖರ್ಚು ವೆಚ್ಚಗಳ ಇಮ್ಮಡಿಯಾಗಿದೆ. ಹೀಗಾಗಿ ಬಸ್ ದರ ಏರಿಕೆಯಾಗಿದೆ ಎಂದು ಸರ್ಕಾರ ಹೇಳಿದೆ.