ಸ್ಯಾಲರಿ ಬೇಕೋ, ವಜಾ ಆಗ್ತೀರೋ..? ಮುಷ್ಕರಕ್ಕೆ ಮಾಸ್ಟರ್ ಸ್ಟ್ರೋಕ್ ಕೊಟ್ಟ ಸರ್ಕಾರ

ಸಾರಿಗೆ ನೌಕರರು ಮುಷ್ಕರ ಕೈ ಬಿಡಲು ಒಪ್ಪುತ್ತಿಲ್ಲ, ಬೇಡಿಕೆ ಈಡೇರಿಕೆಗೆ ಸರ್ಕಾರ ಒಪ್ಪುತ್ತಿಲ್ಲ. ಸರ್ಕಾರ - ನೌಕರರ ನಡುವಿನ ಹಗ್ಗ ಜಗ್ಗಾಟ ಮುಂದುವರೆದಿದೆ. ಮುಷ್ಕರ ಹತ್ತಿಕ್ಕಲು ಸರ್ಕಾರ ಸಾರಿಗೆ ನೌಕರರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದೆ. 

First Published Apr 12, 2021, 10:09 AM IST | Last Updated Apr 12, 2021, 10:09 AM IST

ಬೆಂಗಳೂರು (ಏ. 12): ಸಾರಿಗೆ ನೌಕರರು ಮುಷ್ಕರ ಕೈ ಬಿಡಲು ಒಪ್ಪುತ್ತಿಲ್ಲ, ಬೇಡಿಕೆ ಈಡೇರಿಕೆಗೆ ಸರ್ಕಾರ ಒಪ್ಪುತ್ತಿಲ್ಲ. ಸರ್ಕಾರ - ನೌಕರರ ನಡುವಿನ ಹಗ್ಗ ಜಗ್ಗಾಟ ಮುಂದುವರೆದಿದೆ. ಮುಷ್ಕರ ಹತ್ತಿಕ್ಕಲು ಸರ್ಕಾರ ಸಾರಿಗೆ ನೌಕರರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದೆ. 

ದೇಶದಲ್ಲಿ 2 ನೇ ಅಲೆ, ಸೋಂಕಿತರ ಸಂಖ್ಯೆಯಲ್ಲಿ ದಾಖಲೆ, ಬೆಚ್ಚಿ ಬಿತ್ತು ಭಾರತ.!

ಈಗಾಗಲೇ 118 ಸಿಬ್ಬಂದಿಯನ್ನು ವಜಾಗೊಳಿಸಿದೆ. 84 ಮಂದಿ ಎತ್ತಂಗಡಿ ಮಾಡಲಾಗಿದೆ. 52 ವರ್ಷ ಮೀರಿದವರು ಫಿಟ್ನೆಸ್ ಪತ್ರ ನೀಡಬೇಕು, ಇಲ್ಲದಿದ್ರೆ ಕಾಯಂ ನಿವೃತ್ತಿ ಮಾಡುವ ಎಚ್ಚರಿಕೆ ನೀಡಿದೆ. ಬಿಎಂಟಿಸಿ ಇದುವರೆಗೂ 1484 ಮಂದಿ ತರಬೇತಿ ನಿರತ ನೌಕರರಿಗೆ ನೊಟೀಸ್ ನೀಡಿ ಕೂಡಲೇ ಕರ್ತವ್ಯಕ್ಕೆ ಹಾಜರಾಗದಿದ್ರೆ ಸೇವೆಯಿಂದ ವಜಾಗೊಳಿಸುವ ಎಚ್ಚರಿಕೆ ನೀಡಿದೆ.