Karnataka Bandh: ಬೆಂಬಲ ನೀಡುವಂತೆ ವಾಟಾಳ್ ನಾಗರಾಜ್, ಸಾರಾ ಗೋವಿಂದು ಜೀಪ್ ರ್ಯಾಲಿ

ರಾಜ್ಯದಲ್ಲಿ ಎಂಇಎಸ್‌ (MES) ನಿಷೇಧಕ್ಕೆ ಆಗ್ರಹಿಸಿ ಡಿ.31ರಂದು ಕರೆ ಕೊಟ್ಟಿರುವ ಕರ್ನಾಟಕ ಬಂದ್‌ಗೆ (Karnataka Bandh) ಬೆಂಬಲ ನೀಡುವಂತೆ ನಗರದ ವಿವಿಧೆಡೆ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ಕನ್ನಡ ಹೋರಾಟಗಾರರು ಮನವಿ ಮಾಡಿದರು.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 27): ರಾಜ್ಯದಲ್ಲಿ ಎಂಇಎಸ್‌ (MES) ನಿಷೇಧಕ್ಕೆ ಆಗ್ರಹಿಸಿ ಡಿ.31ರಂದು ಕರೆ ಕೊಟ್ಟಿರುವ ಕರ್ನಾಟಕ ಬಂದ್‌ಗೆ (Karnataka Bandh) ಬೆಂಬಲ ನೀಡುವಂತೆ ನಗರದ ವಿವಿಧೆಡೆ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ಕನ್ನಡ ಹೋರಾಟಗಾರರು ಮನವಿ ಮಾಡಿದರು.

Night Curfew: ಎಲೆಕ್ಷನ್‌ಗಿಲ್ಲದ ನೈಟ್‌ ಕರ್ಫ್ಯೂ ಈಗ್ಯಾಕ್ರಿ..? ಜೋಗಿ ಪ್ರೇಮ್

ಮಲ್ಲೇಶ್ವರದ ಪ್ರಮುಖ ರಸ್ತೆಗಳಲ್ಲಿ ಕನ್ನಡ ಹೋರಾಟಗಾರರಾದ ಸಾ.ರಾ.ಗೋವಿಂದು, ವಾಟಾಳ್‌ ನಾಗರಾಜ್‌, ಕೆ.ಆರ್‌.ಕುಮಾರ್‌ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯರ್ತರು ಬಂದ್‌ ಕುರಿತು ಜಾಗೃತಿ ರ್ಯಾಲಿ ನಡೆಸಿದರು. ನಂತರ ಪ್ರಮುಖ ವೃತ್ತಗಳಲ್ಲಿ ಎಂಇಎಸ್‌ ಪುಂಡಾಟ ವಿರೋಧಿಸಿ ಭಾಷಣ ಮಾಡಿ ಸಾರ್ವಜನಿಕರ ಬೆಂಬಲ ಕೋರಿದರು.

ಈ ವೇಳೆ ಮಾತನಾಡಿದ ವಾಟಾಳ್‌ ನಾಗರಾಜ್‌, ಎಂಇಎಸ್‌ ಮತ್ತು ಶಿವಸೇನೆ ಪುಂಡರು ಕನ್ನಡ ಬಾವುಟವನ್ನು ಸುಟ್ಟಿದ್ದಾರೆ. ಗಡಿ ಜಿಲ್ಲೆಗಳಲ್ಲಿ ಕನ್ನಡಿಗರ ಆಸ್ತಿ ಹಾನಿ ಮಾಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆಯಾಗಲಿದೆ. ಹೀಗಾಯೇ ಎಂಇಎಸ್‌ ನಿಷೇಧಕ್ಕೆ ಆಗ್ರಹಿಸಿ ಕರೆಕೊಟ್ಟಿರುವ ಬಂದ್‌ಗೆ ಬೆಂಬಲ ನೀಡಬೇಕು. ಇನ್ನು ನೆಪ ಮಾತ್ರಕ್ಕೆ ನೀಡುವ ನೈತಿಕ ಬೆಂಬಲ ಬೇಡ, ಸಂಪೂರ್ಣ ಬೆಂಬಲ ನೀಡಬೇಕು' ಎಂದು ಮನವಿ ಮಾಡಿದರು.

Related Video