ಸರ್ಕಾರ ನಮ್ಮ ಜೊತೆ ಚರ್ಚೆ ನಡೆಸಿಲ್ಲ, ನಮಗೆ ಈ ಕಾಯ್ದೆ ಬೇಡ : ರೈತ ಮಹಿಳೆ

ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ತರಲು ಹೊರಟಿರುವ ಸರ್ಕಾರದ ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ರೈತ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಬಂದ್‌ಗೂ ಕೂಡಾ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 

First Published Sep 28, 2020, 3:53 PM IST | Last Updated Sep 28, 2020, 3:53 PM IST

ಬೆಂಗಳೂರು (ಸೆ. 28): ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ತರಲು ಹೊರಟಿರುವ ಸರ್ಕಾರದ ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ರೈತ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಬಂದ್‌ಗೂ ಕೂಡಾ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 

ರೈತ ಮಹಿಳೆ ಮಂಜುಳಾ ಎಂಬುವವರು ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ' ವಿಧೇಯಕಕ್ಕೂ ಮುನ್ನ ಸರ್ಕಾರ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನಮ್ಮ ಜೊತೆ ಚರ್ಚೆ ನಡೆಸಿಲ್ಲ. ಈ ಕಾಯ್ದೆ ಜಾರಿಗೆ ಬಂದರೆ ರೈತರಿಗೆ ಅನಾನುಕೂಲವಾಗುತ್ತದೆ. ನಮಗೆ ಯಾವುದೇ ಕಾರಣಕ್ಕೂ ಈ ಕಾಯ್ದೆ ಬೇಡ. ಇದನ್ನು ನಾವು ವಿರೋಧಿಸುತ್ತೇವೆ' ಎಂದು ಹೇಳಿದರು. 

Video Top Stories