Asianet Suvarna News Asianet Suvarna News

ಮರಾಠಿ ಆಸ್ಮಿತೆ ಎಂದು ನಾಲಿಗೆ ಹರಿಬಿಟ್ಟ ಠಾಕ್ರೆ, ಇವೆಲ್ಲಾ ಚೆನ್ನಾಗಿರಲ್ಲ ಎಂದು ಎಚ್ಚರಿಸಿದ ಕರವೇ

ಮರಾಠಿ ಅಸ್ಮಿತೆ ಮರಾಠಿಗರ ತಾಕತ್ತು ಎಂದು ತೋರಿಸುವ ಕಾಲ ಬಂದಿದೆ. ಕನ್ನಡಿಗರ ದೌರ್ಜನ್ಯವನ್ನು ನಾವು ಸಹಿಸಲ್ಲ. ದೌರ್ಜನ್ಯ ಮಾಡಿದರೆ ನಾವು ಪ್ರತಿಭಟಿಸ್ತೀವಿ. ಬೆಳಗಾವಿಯಲ್ಲಿದ್ದದ್ದು ಕನ್ನಡಿಗರ ತಾಕತ್ತಲ್ಲ, ಮರಾಠಿಗರ ತಾಕತ್ತು' ಎಂದು ಉದ್ಧವ್ ಠಾಕ್ರೆ ನಾಲಿಗೆ ಹರಿ ಬಿಟ್ಟಿದ್ದಾರೆ. 

ಬೆಂಗಳೂರು (ಜ. 27): ಮರಾಠಿ ಅಸ್ಮಿತೆ ಮರಾಠಿಗರ ತಾಕತ್ತು ಎಂದು ತೋರಿಸುವ ಕಾಲ ಬಂದಿದೆ. ಕನ್ನಡಿಗರ ದೌರ್ಜನ್ಯವನ್ನು ನಾವು ಸಹಿಸಲ್ಲ. ದೌರ್ಜನ್ಯ ಮಾಡಿದರೆ ನಾವು ಪ್ರತಿಭಟಿಸ್ತೀವಿ. ಬೆಳಗಾವಿಯಲ್ಲಿದ್ದದ್ದು ಕನ್ನಡಿಗರ ತಾಕತ್ತಲ್ಲ, ಮರಾಠಿಗರ ತಾಕತ್ತು' ಎಂದು ಉದ್ಧವ್ ಠಾಕ್ರೆ ನಾಲಿಗೆ ಹರಿ ಬಿಟ್ಟಿದ್ದಾರೆ. 

'ಕನ್ನಡಿಗರ ತಾಕತ್ತೇನು ಎಂದು ಮರಾಠಿಗರಿಗೆ ತೋರಿಸಲು ರೆಡಿ ಇದ್ದೇವೆ', ಠಾಕ್ರೆಗೆ ಸವಾಲ್..!

ಮುಖ್ಯಮಂತ್ರಿಯಾಗಿ ಹೇಗೆ ಮಾತನಾಡಬೇಕು ಎಂದು ಅವರಿಗೆ ಗೊತ್ತಾಗುತ್ತಿಲ್ಲ ಎಂದು ಕಾಣಿಸುತ್ತದೆ. ಹುಚ್ಚು ಹಿಡಿದ ಹಾಗೆ ಮಾತಾಡ್ತಾರೆ. ಇಂತಹ ಹುಚ್ಚಾಟವನ್ನು ಬಿಡಬೇಕು. ನಾವಿದಕ್ಕೆಲ್ಲಾ ಅವಕಾಶ ಕೊಡುವುದಿಲ್ಲ. ನಮ್ಮ ಸರ್ಕಾರ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸುಪ್ರೀಂ ಮೊರೆ ಹೋಗಿ ಅವರ ಸಿಎಂ ಸ್ಥಾನವನ್ನು ವಜಾಗೊಳಿಸಬೇಕು' ಎಂದು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಒತ್ತಾಯಿಸಿದ್ದಾರೆ. 

Video Top Stories