ಹಿಂದಿ ಬಳಸಿದ್ದಕ್ಕೆ ಕರವೇ ಕಾರ್ಯಕರ್ತರು ಬಿಸಿ, ಮೋದಿ ಬ್ಯಾನರ್‌ಗೆ ಮಸಿ

ಬೆಂಗಳೂರಿನಲ್ಲಿ ಮೋದಿ ವೆಲ್ಕಮ್ ಬ್ಯಾನರ್ಗಳು ರಾರಾಜಿಸುತ್ತಿವೆ.  ಮೈಸೂರು ರಸ್ತೆಯಲ್ಲಿ ಮೋದಿ ಸ್ವಾಗತಕ್ಕೆ ಹಿಂದಿ ಬ್ಯಾನರ್ ಹಾಕಲಾಗಿದ್ದು, ಇದಕ್ಕೆ ರಕ್ಷಣಾ ವೇದಿಕೆ ಆಕ್ಷೇಪಿಸಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.19): ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಇದೇ 20ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ ಮೋದಿ ಸಂಚರಿಸುವ ರಸ್ತೆಗಳಲ್ಲಿ ಬ್ಯಾನರ್‌ಗಳು ರಾರಾಜಿಸುತ್ತಿವೆ. 

ಬೆಂಗಳೂರಿಗೆ ಮೋದಿ, ಹಲವು ರಸ್ತೆಗಳಲ್ಲಿ ಸಂಚಾರ, ಪಾರ್ಕಿಂಗ್ ನಿಷೇಧ: ಇಲ್ಲಿದೆ ಪರ್ಯಾಯ ಮಾರ್ಗಗಳು

ನಗರದ ಹಲವೆಡೆ ಮೋದಿ ವೆಲ್ಕಮ್ ಬ್ಯಾನರ್ಗಳು ರಾರಾಜಿಸುತ್ತಿವೆ. ಮೈಸೂರು ರಸ್ತೆಯಲ್ಲಿ ಮೋದಿ ಸ್ವಾಗತಕ್ಕೆ ಹಿಂದಿ ಬ್ಯಾನರ್ ಹಾಕಲಾಗಿದ್ದು, ಇದಕ್ಕೆ ರಕ್ಷಣಾ ವೇದಿಕೆ ಆಕ್ಷೇಪಿಸಿದೆ. ಅಲ್ಲದೇ ಟಿ.ಎ ನಾರಾಯಣಗೌಡ ಬಣದ ಕರವೇ ಕಾರ್ಯಕರ್ತರು ಹಿಂದಿ ಭಾಷೆಯಲ್ಲಿ ಬ್ಯಾನರ್ ಹಾಕಿದ ಹಿನ್ನಲೆಯಲ್ಲಿ ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ಪೊಲೀಸ್ ಮತ್ತು ರಕ್ಷಣಾ ವೇದಿಕೆಯ ಯುವ ಘಟಕದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ನಡೆದಿದೆ.

Related Video