ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣ ನ್ಯೂಸ್​​ ಯುಗಾದಿ ಸಂಭ್ರಮ.. ಸಾಹಿತ್ಯ ಸಾಧಕರಿಗೆ ಪ್ರಶಸ್ತಿ

ಗಾನ ಗಾರುಡಿಗ ಪಂಡಿತ್‌ ಎಂ. ವೆಂಕಟೇಶ್‌ ಕುಮಾರ್‌, ಹಿರಿಯ ಕವಿ ಬಿ.ಆರ್‌.ಲಕ್ಷ್ಮಣರಾವ್‌, ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಚಿತ್ರಕಲಾವಿದ ಪ.ಸ.ಕುಮಾರ್‌ ಹಾಗೂ ನಟಿ ಅಕ್ಷತಾ ಪಾಂಡವಪುರ ಅವರು 2025ನೇ ಸಾಲಿನ ‘ಕನ್ನಡಪ್ರಭ’ ಹಾಗೂ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಯುಗಾದಿ ಸಂಭ್ರಮದ ‘ಯುಗಾದಿ ಪುರಸ್ಕಾರ’ಕ್ಕೆ ಭಾಜನರಾದರು. 
 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.31): ಗಾನ ಗಾರುಡಿಗ ಪಂಡಿತ್‌ ಎಂ. ವೆಂಕಟೇಶ್‌ ಕುಮಾರ್‌, ಹಿರಿಯ ಕವಿ ಬಿ.ಆರ್‌.ಲಕ್ಷ್ಮಣರಾವ್‌, ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಚಿತ್ರಕಲಾವಿದ ಪ.ಸ.ಕುಮಾರ್‌ ಹಾಗೂ ನಟಿ ಅಕ್ಷತಾ ಪಾಂಡವಪುರ ಅವರು 2025ನೇ ಸಾಲಿನ ‘ಕನ್ನಡಪ್ರಭ’ ಹಾಗೂ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಯುಗಾದಿ ಸಂಭ್ರಮದ ‘ಯುಗಾದಿ ಪುರಸ್ಕಾರ’ಕ್ಕೆ ಭಾಜನರಾದರು. ‘ಗುಬ್ಬಿಗೂಡು’ ಪ್ರಾಯೋಜಿತ ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ‘ಯುಗಾದಿ ಸಂಭ್ರಮ’ ಕಾರ್ಯಕ್ರಮದಲ್ಲಿ ಈ ಸಾಧಕರಿಗೆ ಖ್ಯಾತ ನಿರ್ದೇಶಕರಾದ ಟಿ.ಎನ್‌. ಸೀತಾರಾಮ್‌, ಬಿ.ಎಸ್‌.ಲಿಂಗದೇವರು, ಪ್ರಧಾನ ಸಂಪಾದಕ ರವಿ ಹೆಗಡೆ, ಗುಬ್ಬಿಗೂಡು ಸಂಸ್ಥೆಯ ಮಾಲೀಕ ಮಹೇಶ್‌ ಹಾಗೂ ಪುರವಣಿ ಸಂಪಾದಕ ಜೋಗಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ₹ 25,000 ಮೊತ್ತ, ಸ್ಮರಣಿಕೆ, ಪ್ರಮಾಣಪತ್ರ ಒಳಗೊಂಡಿದೆ.

Related Video