ವನ್ಯಜೀವಿ ಸಂರಕ್ಷಣಾ ಅಭಿಯಾನ: ನಾಗರಹೊಳೆಯಲ್ಲಿ ಒಂದು ಸುತ್ತು

ನಾಗರಹೊಳೆಯಲ್ಲಿ ಆನೆ, ಹುಲಿ, ಚಿರತೆ, ಕಾಡುಕೋಣ, ಕಡವೆ ಹಾಗೂ ವಿಶಿಷ್ಠ ಪಕ್ಷಿ ಸಂಕುಲಗಳಿಂದ ತುಂಬಿ ಹೋಗಿದೆ. ಇದರ ಜತೆಗೆ ಅಪರೂಪದ ಕಪ್ಪು ಚಿರತೆಗಳಿಗೂ ಜಗತ್ಪ್ರಸಿದ್ದವಾಗಿದೆ. ಈ ಅಭಯಾರಣ್ಯದ ನಡುವೆ ಆದಿವಾಸಿಗಳ ಹಾಡಿಯನ್ನು ಹೊಂದಿದೆ. ಜೊತೆಗೆ ಈ ಕಾಡು ನೂರಾರು ಹಳ್ಳಿಗಳಿಂದ ಸುತ್ತುವರೆದಿದೆ. ಹೀಗಾಗಿ ಇಲ್ಲಿ ಮಾನವ ಹಾಗೂ ವನ್ಯ ಜೀವಿಗಳ ಸಂಘರ್ಷ ಕೂಡಾ ಹೆಚ್ಚಾಗಿ ಕಂಡು ಬರುತ್ತದೆ.

Share this Video
  • FB
  • Linkdin
  • Whatsapp

ರಾಜೀವ್ ಗಾಂಧಿ ಹುಲಿ ಸಂರಕ್ಷತಾ ಅಭಯಾರಣ್ಯ ನಾಗರಹೊಳೆ. ಮೈಸೂರು ಮತ್ತು ಕೊಡಗು ಜಿಲ್ಲೆಗಳ ಮಧ್ಯೆ 642 ಚದರ ಕಿಲೋ ಮೀಟರ್ ಹಬ್ಬಿದೆ ಈ ಅಭಯಾರಣ್ಯ. ಕುರುಚಲು, ಎಲೆ ಉದುರುವ ಕಾಡಿನಿಂದ ಹಿಡಿದು ಅರೆ ನಿತ್ಯಹರಿದ್ವರ್ಣ ಸೇರಿದಂತೆ ಹಲವು ಸಸ್ಯ ವೈವಿದ್ಯಗಳನ್ನು ಹೊಂದಿದೆ.

ಆನೆ, ಹುಲಿ, ಚಿರತೆ, ಕಾಡುಕೋಣ, ಕಡವೆ ಹಾಗೂ ವಿಶಿಷ್ಠ ಪಕ್ಷಿ ಸಂಕುಲಗಳಿಂದ ತುಂಬಿ ಹೋಗಿದೆ. ಇದರ ಜತೆಗೆ ಅಪರೂಪದ ಕಪ್ಪು ಚಿರತೆಗಳಿಗೂ ಜಗತ್ಪ್ರಸಿದ್ದವಾಗಿದೆ. ಈ ಅಭಯಾರಣ್ಯದ ನಡುವೆ ಆದಿವಾಸಿಗಳ ಹಾಡಿಯನ್ನು ಹೊಂದಿದೆ. ಜೊತೆಗೆ ಈ ಕಾಡು ನೂರಾರು ಹಳ್ಳಿಗಳಿಂದ ಸುತ್ತುವರೆದಿದೆ. ಹೀಗಾಗಿ ಇಲ್ಲಿ ಮಾನವ ಹಾಗೂ ವನ್ಯ ಜೀವಿಗಳ ಸಂಘರ್ಷ ಕೂಡಾ ಹೆಚ್ಚಾಗಿ ಕಂಡು ಬರುತ್ತದೆ.

ವನ್ಯಜೀವಿ ಸಂರಕ್ಷಣಾ ಅಭಿಯಾನ: ಬಂಡಿಪುರ ಅರಣ್ಯದೊಳಗೆ ಮೊದಲ ಹೆಜ್ಜೆ 

ಹೀಗಾಗಿ ಈ ಸಂಘರ್ಷದ ವಿವಿಧ ಕಾರಣಗಳು, ಅರಣ್ಯ ಇಲಾಖೆಯ ಸವಾಲುಗಳನ್ನು ತಿಳಿದುಕೊಂಡು, ಆ ಮೂಲಕ ಸುತ್ತಮುತ್ತಲ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಕನ್ನಡಪ್ರಭ-ಸುವರ್ಣ ನ್ಯೂಸ್ ಮತ್ತು ಅರಣ್ಯ ಇಲಾಖೆಯ ಸಹಯೋಗದ ನಮ್ಮ ವನ್ಯಜೀವಿ ಸಂರಕ್ಷಣಾ ಅಭಿಯಾನದ ತಂಡ ನಾಗರ ಹೊಳೆಯನ್ನು ತಲುಪಿದೆ. ಹುಲಿ ಸಂರಕ್ಷಣೆ ಅಭಿಯಾನದ ರಾಯಭಾರಿ, ನಟ ಶ್ರೀ ಮುರುಳಿ, ನಿರ್ಮಾಪಕಿ ಶ್ರುತಿ ನಾಯ್ಡು ನಮ್ಮ ತಂಡಕ್ಕೆ ಸಾಥ್ ನೀಡಿದರು. ನಾಗರ ಹೊಳೆ ಅಭಿಯಾರಣ್ಯ ಕಂಡಿದ್ದು ಹೇಗೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

Related Video