ಕನ್ನಡ ಪ್ರಭ ಪತ್ರಿಕೆಯ ಹೊಸ ಇ ಪುರವಣಿ ಸಾಹಿತ್ಯಪ್ರಭ ಲೋಕಾರ್ಪಣೆ!

ಹೊಸತನಕ್ಕೆ ಹೆಸರಾಗಿರುವ ಕನ್ನಡ ಪ್ರಭ ದಿನ ಪತ್ರಿಕೆ ಇದೀಗ ಸಾಹಿತ್ಯಕ್ಕೆ ಡಿಜಿಟಲ್ ವೇದಿಕೆ ಕಲ್ಪಿಸಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಿಕೆಯ ಹೊಸ ಇ ಪುರವಣಿ ಸಾಹಿತ್ಯಪ್ರಭ ಲೋಕಾರ್ಪಣೆಗೊಂಡಿದೆ.

Share this Video
  • FB
  • Linkdin
  • Whatsapp

ಕನ್ನಡಪ್ರಭ ಪತ್ರಿಕೆಯ ಹೊಸ ಇ ಪುರವಣಿ ಸಾಹಿತ್ಯಪ್ರಭವನ್ನ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಟ ನವೀನ್ ಶಂಕರ್ ಅವರು ಮುಂಬೈನಲ್ಲಿ ಲೋಕಾರ್ಪಣೆ ಮಾಡಿದರು. ಮುಂಬೈನಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭದ ವತಿಯಿಂದ ನಡೆದ ನಾರ್ತ್ ಅಚೀವರ್ಸ್ ಆಫ್ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತ್ಯ ಪ್ರಭ ಲೋಕಾರ್ಪಣೆಯಾಯ್ತು. kpepaper.asianetnews.com ವೆಬ್ ಸೈಟ್ ನಲ್ಲಿ ಎರಡು ವಾರಕ್ಕೊಮ್ಮೆ ಈ ಸಾಹಿತ್ಯ ಪ್ರಭ ಪ್ರಕಟವಾಗಲಿದೆ. ಹಲವು ಹೊಸತನಗಳಿಗೆ ಹೆಸರಾಗಿರುವ ಕನ್ನಡಪ್ರಭ ಈಗ ಸಾಹಿತ್ಯಕ್ಕೆ ಹೊಸ ಡಿಜಿಟಲ್ ವೇದಿಕೆ ಕಲ್ಪಿಸಿದೆ. ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಕನ್ನಡಪ್ರಭ ‌ಪುರವಣಿ ಸಂಪಾದಕ ಜೋಗಿ ಹಾಜರಿದ್ದರು.

Related Video