ವಿರೂಪಾಕ್ಷಪ್ಪಗೆ ಲೋಕಾಯುಕ್ತ ಖೆಡ್ಡಾ ತೋಡಿದ್ದು ಹೇಗೆ? ನ್ಯಾ. ಬಿಎಸ್ ಪಾಟೀಲ್ ವಿವರಿಸಿದ್ದು ಹೀಗೆ
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಮುಖ್ಯನ್ಯಾಯಮೂರ್ತಿ ಬಿಎಸ್ ಪಾಟೀಲ್ ಮಾತನಾಡಿದ್ದಾರೆ.
ಬೆಂಗಳೂರು(ಮಾ.3): ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಮುಖ್ಯನ್ಯಾಯಮೂರ್ತಿ ಬಿಎಸ್ ಪಾಟೀಲ್ ಮಾತನಾಡಿ ಪ್ರಶಾಂತ್ ಕಚೇರಿಯಲ್ಲಿ 2 ಕೋಟಿ 2 ಲಕ್ಷ ರೂ ಹಾಗೂ ನಿವಾಸದಲ್ಲಿ 6.10 ಕೋಟಿ ನಗದು ಪತ್ತೆಯಾಗಿದೆ. ಪ್ರಕರಣದಲ್ಲಿ ಒಟ್ಟು 5 ಜನರನ್ನ ಈಗಾಗಲೇ ಬಂಧಿಸಿದ್ದೇವೆ. ಪ್ರಶಾಂತ್ ಹಾಗೂ ಅಕೌಂಟೆಂಟ್ ಬಂಧಿಸಿದ್ದೇವೆ. ಲಂಚ ನೀಡಲು ಬಂದಿದ್ದ ಮೂವರ ಬಂಧನವೂ ಆಗಿದೆ ಎಂದರು. ತನಿಖೆಯಿಂದ ಎಲ್ಲಾ ಸತ್ಯಾಸತ್ಯತೆ ಹೊರಬಂದಿದೆ. ಜನರು ಸಹಕಾರ ಕೊಟ್ಟರೆ ಇಂತಹ ದೊಡ್ಡ ರೇಡ್ ಗಳನ್ನು ಮಾಡಬಹುದು ಎಂದಿದ್ದಾರೆ.