ಜಿಟಿ ದೇವೇಗೌಡರನ್ನು ಬಂಧಿಸಲು ಕಾಂಗ್ರೆಸ್ ಮಾಡಿತ್ತಾ ಪ್ಲಾನ್? ಬಾಂಬ್ ಸಿಡಿಸಿದ ಹೆಚ್‌ಡಿ ರೇವಣ್ಣ!

ಜೆಡಿಎಸ್ ಶಾಸಕರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ಬಾಂಬ್, ಕರ್ನಾಟಕ ಬಿಜೆಪಿಯಲ್ಲಿ ಬಣ ಬಡಿದಾಟ, ಮುಡಾ ತನಿಖೆ ನಡುವೆ ದಾಖಲಾಯ್ತು ಹೊಸ ಕೇಸ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಚನ್ನಪಟ್ಟಣ ಉಪಚುನಾವಣೆ ಗೆದ್ದ ಸಿಪಿ ಯೋಗೇಶ್ವರ್, ಒಂದೇ ತಿಂಗಳಲ್ಲಿ ಜೆಡಿಎಸ್ ಶಾಸಕರನ್ನು ಖಾಲಿ ಮಾಡುತ್ತೇನೆ, ಕಾಂಗ್ರೆಸ್ ಸೇರಿಸುತ್ತೇನೆ ಎಂದು ಸ್ಫೋಟಕ ಮಾತನ್ನಾಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಇಂದು ಜೆಡಿಎಸ್ ಶಾಸಕರು ಒಗ್ಗಟ್ಟಾಗಿ ಸುದ್ದಿಗೋಷ್ಠಿ ನಡೆಸಿ ಸವಾಲು ಹಾಕಿದ್ದರು.ಇದರ ನಡುವೆ ಶಾಸಕ ಹೆಚ್‌ಡಿ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. 2017ರಲ್ಲಿ ಹೌಸಿಂಗ್ ಬೋರ್ಡ್ ಹಗಣರದ ಸುಳ್ಳು ಕೇಸ್‌ನಲ್ಲಿ ಜಿಟಿ ದೇವೇಗೌಡರನ್ನು ಬಂಧಿಸಲು ಕಾಂಗ್ರೆಸ್ ಪ್ಲಾನ್ ಮಾಡಿತ್ತು ಎಂದು ಹೆಚ್‌ಡಿ ರೇವಣ್ಣ ಹೇಳಿದ್ದಾರೆ. 

Related Video