News Hour: ಕೇಸ್ ಮಾಡಿದ ಪುತ್ರ ಜರ್ಮನಿಗೆ, ಕಿಡ್ನಾಪ್ ಮಾಡಿದ ಅಪ್ಪ ಜೈಲಿಗೆ!
ಪೆನ್‌ಡ್ರೈವ್ ಕೇಸ್‌ನಲ್ಲಿ ಜೆಡಿಎಸ್ ನಾಯಕರು ಸಿಡಿದೆದ್ದಿದ್ದಾರೆ. ಈ ಕೇಸ್‌ನಲ್ಲಿ ಡಿಕೆ ಶಿವಕುಮಾರ್ ಪಾತ್ರ ಇದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಲಾಗಿದ್ದು, ಡಿಕೆಶಿ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಮೇ. 8): ಕಿಡ್ನಾಪ್ ಕೇಸ್‌ನಲ್ಲಿ ಜೆಡಿಎಸ್ ನಾಯಕ ಎಚ್‌ಡಿ ರೇವಣ್ಣ ಪರಪ್ಪನ ಅಗ್ರಹಾರ ಸೇರಿದ್ದಾರೆ. ಏಳು ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ ನೀಡಿದೆ. ಈ ವೇಳೆ ಕಣ್ಣೀರಿಡುತ್ತಲೇ ಮಾಜಿ ಸಚಿವ ಜೈಲಿಗೆ ನಡೆದಿದ್ದಾರೆ.
ಇನ್ನೊಂದೆಡೆ, ಎಚ್ಡಿಕೆ, ಡಿಕೆಶಿ ಮಧ್ಯೆ ಕಥಾನಾಯಕ ಕಾಳಗ ಜೋರಾಗಿ ನಡೆಯುತ್ತಿದೆ. ಬ್ಲಾಕ್ಮೇಲರ್ ಹೆಸರಲ್ಲಿ ನಾಯಕರ ವಾಕ್ಸಮರ ನಡೆದಿದೆ. JDS ಪ್ರತಿಭಟನೆಗೆ ಕಾಂಗ್ರೆಸ್ ಒಕ್ಕಲಿಗ ಸಚಿವರ ಶಕ್ತಿಪ್ರದರ್ಶನ ನಡೆದಿದೆ.
ಮಾಜಿ ಸಚಿವ ಹೆಚ್.ಡಿ. ರೇವಣ್ಣಗೆ ಕೈದಿ ನಂಬರ್ 4567
ಇನ್ನು ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಎಸ್‌ಐಟಿ ತನಿಖೆ ರೀತಿಯ ಬಗ್ಗೆಯೇ ವಕೀಲ ದೇವರಾಜೇಗೌಡ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಆರೋಪಗಳಿಗೂ ಅವರು ಉತ್ತರ ನೀಡಿದ್ದಾರೆ.