Asianet Suvarna News Asianet Suvarna News

'ನನ್ನದು ಅಂತ ಸೀಡಿಗಳೆಲ್ಲಾ ಇಲ್ಲಾರೀ.. ನಾನು ಕೋರ್ಟ್ ಮೊರೆ ಹೋಗಲ್ಲ'

6 ಸಚಿವರು ಕೋರ್ಟ್ ಮೊರೆ ಹೋಗಿರುವ ವಿಚಾರದಲ್ಲಿ ಸಚಿವ ಮಾಧುಸ್ವಾಮಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. 'ನನ್ನದು ಅಂತ ಸೀಡಿಗಳೆಲ್ಲಾ ಇಲ್ಲಾರೀ.. ನಾನು ಕೋರ್ಟ್ ಮೊರೆ ಹೋಗಲ್ಲ. ನಾನು ಮಾತಾಡಿದ್ರೂ ತಪ್ಪು, ಸುಮ್ಮನಿದ್ರೂ ತಪ್ಪು' ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. 

Mar 7, 2021, 2:19 PM IST

ಬೆಂಗಳೂರು (ಮಾ. 07): 6 ಸಚಿವರು ಕೋರ್ಟ್ ಮೊರೆ ಹೋಗಿರುವ ವಿಚಾರದಲ್ಲಿ ಸಚಿವ ಮಾಧುಸ್ವಾಮಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. 'ನನ್ನದು ಅಂತ ಸೀಡಿಗಳೆಲ್ಲಾ ಇಲ್ಲಾರೀ.. ನಾನು ಕೋರ್ಟ್ ಮೊರೆ ಹೋಗಲ್ಲ. ನಾನು ಮಾತಾಡಿದ್ರೂ ತಪ್ಪು, ಸುಮ್ಮನಿದ್ರೂ ತಪ್ಪು' ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. 

ಸಾಹುಕಾರನ ಕುರ್ಚಿ ಸಹೋದರನಿಗೆ ಸಿಗುತ್ತಾ? ತೆರೆಮರೆಯಲ್ಲಿ ಅಣ್ತಮ್ಮಾಸ್ ಸರ್ಕಸ್!

'ಯಾರಾದ್ರೂ ಫೇಕ್ ಸೀಡಿಯನ್ನು ತಂದು ತೇಜೋವಧೆ ಮಾಡುವುದನ್ನು ತಡೆಯುವ ಉದ್ದೇಶದಿಂದ ಕೋರ್ಟ್ ಮೊರೆ ಹೋಗಿದ್ದು ತಪ್ಪಲ್ಲ. ಮಾನ ಎಲ್ಲಾ ಹೋದ ಮೇಲೆ ಕೋರ್ಟ್ ತೀರ್ಪು ನಮ್ಮಂತೆ ಬಂದರೂ ಏನು ಪ್ರಯೋಜನ.? ಮಾತಾಡಿದ್ದನ್ನ ಜನ ನೆನಪಿಟ್ಟುಕೊಳ್ಳುತ್ತಾರೆ. ಆರೋಪ ಸುಳ್ಳು ಅಂತ ಬಂದಿದ್ದನ್ನ ನೆನಪಿಟ್ಟುಕೊಳ್ಳಲ್ಲ. ಹಾಗಾಗಿ ಇದನ್ನೆಲ್ಲಾ ತಪ್ಪಿಸಲು ಕೋರ್ಟ್ ಮೊರೆ ಹೋಗಿದ್ದು ತಪ್ಪಲ್ಲ' ಎಂದಿದ್ದಾರೆ.