CM Janata Darshan : ಸಮಸ್ಯೆ ಹೇಳಲು ಬಂದ ಶಿಕ್ಷಕರಿಗೆ ಪೊಲೀಸರಿಂದ ಅಡ್ಡಿ

ಮುಖ್ಯಮಂತ್ರಿ ಜನತಾ ದರ್ಶನಕ್ಕೆ ಬಂದವರಿಗೆ ದರ್ಶನವೇ ಸಿಗಲಿಲ್ಲ. ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದ ಶಿಕ್ಷಕರಿಗೆ ಮುಖ್ಯಮಂತ್ರಿಗಳು ಸಿಗಲಿಲ್ಲ. ಸಿಎಂ ನೋಡಲೆಂದು ಬಂದ ಶಿಕ್ಷಕರಿಗೆ ಪೊಲೀಸರು ಅಡ್ಡಿಪಡಿಸಿದ್ದಾರೆ. ವಸತಿ ಶಾಲಾ ಶಿಕ್ಷಕರ ನೇಮಕಾತಿ ವಿಳಂಬ ಸಮಸ್ಯೆ ಹೇಳಲು ಬಂದಾಗ ಅವರಿಗೆ ಯಾವುದೇ ಪ್ರಯೋಜನವಾಗಿಲ್ಲ. 

Share this Video
  • FB
  • Linkdin
  • Whatsapp

ಬೆಂಗಳೂರು (ನ.18):  ಮುಖ್ಯಮಂತ್ರಿ (Karnataka CM) ಜನತಾ ದರ್ಶನಕ್ಕೆ ಬಂದವರಿಗೆ ದರ್ಶನವೇ ಸಿಗಲಿಲ್ಲ. ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದ ಶಿಕ್ಷಕರಿಗೆ ಮುಖ್ಯಮಂತ್ರಿಗಳು ಸಿಗಲಿಲ್ಲ. ಸಿಎಂ ನೋಡಲೆಂದು ಬಂದ ಶಿಕ್ಷಕರಿಗೆ ಪೊಲೀಸರು (Police) ಅಡ್ಡಿಪಡಿಸಿದ್ದಾರೆ. ವಸತಿ ಶಾಲಾ ಶಿಕ್ಷಕರ ನೇಮಕಾತಿ ವಿಳಂಬ ಸಮಸ್ಯೆ ಹೇಳಲು ಬಂದಾಗ ಅವರಿಗೆ ಯಾವುದೇ ಪ್ರಯೋಜನವಾಗಿಲ್ಲ.

ನದಿ ಜೋಡಣೆ: ರಾಜ್ಯದ ಅಹವಾಲು ಕೇಳಲು ಶಾ ಸೂಚನೆ, ಸಿಎಂ ಬೊಮ್ಮಾಯಿ

ಸಿಎಂ ತುರ್ತಾಗಿ ತೆರಳಬೇಕಿದ್ದರಿಂದ ಪೊಲೀಸರು ಅವಕಾಶ ನೀಡಿಲ್ಲ. ಮಳೆಯಲ್ಲೇ ಕಾದು ನಿಂತಿದ್ದರೂ ಸಮಸ್ಯೆ ಬಗ್ಗೆ ಹೇಳಲು ಸಾಧ್ಯವಾಗಿಲ್ಲ. ಈ ವೇಳೆ ಮಾಧ್ಯಮಗಳ ಸಿಬ್ಬಂದಿಯೂ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿ ಸಿಎಂ ಬಳಿ ಬಿಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದು, ಸಿಎಂ ಮತ್ತೆ ಕಾರಿನಿಂದ ಇಳಿದು ಬಂದು ಕೇಳಿದ್ದು, ತುರ್ತಾಗಿ ತೆರಳಬೇಕಿದ್ದ ಕಾರಣ ಮತ್ತೊಮ್ಮೆ ಪರಿಶೀಲಿಸುವುದಾಗಿ ಹೇಳಿದರು

Related Video