Theatre Fight: ಜೇಮ್ಸ್ ತೆರವಿಗೆ ಆಕ್ರೋಶ, ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ ಅಭಿನಯದ ಜೇಮ್ಸ್‌ (James) ಚಿತ್ರಕ್ಕೆ ‘ದಿ ಕಾಶ್ಮೀರ್‌ ಫೈಲ್ಸ್‌’ಗಿಂತ (The Kashmir Files) ಆರ್‌ಆರ್‌ಆರ್‌ ಸಿನಿಮಾದ್ದೆ ಸಮಸ್ಯೆ ಉಂಟಾಗಿದೆ. 

First Published Mar 24, 2022, 2:58 PM IST | Last Updated Mar 24, 2022, 3:06 PM IST

ಬೆಂಗಳೂರು (ಮಾ. 24): ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ ಅಭಿನಯದ ಜೇಮ್ಸ್‌ (James) ಚಿತ್ರಕ್ಕೆ ‘ದಿ ಕಾಶ್ಮೀರ್‌ ಫೈಲ್ಸ್‌’ಗಿಂತ (The Kashmir Files) ಆರ್‌ಆರ್‌ಆರ್‌ ಸಿನಿಮಾದ್ದೆ ಸಮಸ್ಯೆ ಉಂಟಾಗಿದೆ. 

Theatre Fight: ಜೇಮ್ಸ್‌ಗೂ, ಕಾಶ್ಮೀರ್‌ ಫೈಲ್ಸ್‌ಗೂ ಸಂಬಂಧವಿಲ್ಲ: ಶಿವರಾಜ್‌ಕುಮಾರ್

ಬಿಗ್ ಬಜೆಟ್ ಚಿತ್ರ RRR ಗೋಸ್ಕರ ಜೇಮ್ಸ್‌ ಚಿತ್ರವನ್ನು ತೆಗೆಯಲಾಗುತ್ತಿದೆ ಎಂದು ಅಪ್ಪು ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಪರಭಾಷಾ ಚಿತ್ರಕ್ಕಾಗಿ ಕನ್ನಡ ಚಿತ್ರವನ್ನು ತೆಗೆಯುವುದು ಎಷ್ಟು ಸರಿ ಎಂಬ ಆಕ್ರೋಶವೂ ವ್ಯಕ್ತವಾಗಿದೆ. 

'ಜೇಮ್ಸ್' ಸಿನಿಮಾ ಪ್ರದರ್ಶನಕ್ಕೆ ಯಾವುದೇ ರೀತಿ ಅಡ್ಡಿಪಡಿಸಲು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯವರೊಂದಿಗೆ ಮಾತನಾಡಿದ್ದೇನೆ. ತೊಂದರೆಯಾಗಿರುವಲ್ಲಿ ಕೂಡಲೇ ಸರಿಪಡಿಸಿ ಅನವಶ್ಯಕವಾಗಿ ಜೇಮ್ಸ್ ಸಿನಿಮಾವನ್ನು ಯಾರೂ ಚಿತ್ರಮಂದಿರಗಳಿಂದ ತೆಗೆಯತಕ್ಕದ್ದಲ್ಲ' ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. 

Video Top Stories