ಪಿಎಸ್‌ಐ ಪರೀಕ್ಷೆ ಮಾತ್ರವಲ್ಲ! ಕೆಪಿಎಸ್‌ಸಿ ಪರೀಕ್ಷೆಯಲ್ಲೂ ನಡೆದಿದೆಯಾ ಡೀಲ್?

ಪಿಎಸ್‌ಐ ಮಾತ್ರವಲ್ಲ ಕೆಪಿಎಸ್‌ಸಿಯ 2015 ರ ಬ್ಯಾಚನ ಗೆಜೆಟೆಡ್ ಪ್ರೋಬೇಷನರಿ ಪರೀಕ್ಷೆಯಲ್ಲಿ ಕೂಡ ನಡೆದಿದೆಯಾ ಅಕ್ರಮ. 

First Published May 5, 2022, 12:06 PM IST | Last Updated May 5, 2022, 12:06 PM IST

ಧಾರವಾಡ (ಮೇ.5): 2015 ರ ಬ್ಯಾಚನ ಗೆಜೆಟೆಡ್ ಪ್ರೋಬೇಷನರಿ ಪರೀಕ್ಷೆ (kpsc gazetted probationers 2015 ) ಬರೆದಿರುವ ವಂಚಿತ ಅಭ್ಯರ್ಥಿ ರಮೇಶ ತನಿಖೆದಾರ ಸದ್ಯ RTI ಅಡಿಯಲ್ಲಿ ಕೆಪಿಎಸ್‌ಸಿ ಗೆ ಮಾಹಿತಿಯನ್ನ ಕೇಳಿದ್ದಾರೆ. 2015 ನೇಯ ಸಾಲಿನ 428 ಗೆಜೆಟೆಡ್ ಪ್ರೋಬೇಷನರ್ ಹುದ್ದೆಗಳ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಯ ದೃಡಿಕೃತ ಪ್ರತಿ ಮತ್ತು ಮುಖ್ಯ ಪರೀಕ್ಷೆಯ ಅಂಕಗಳ ತಿದ್ದಿರುವ ಸಾದ್ಯತೆ ಇರುವ ಉದ್ದೇಶದಿಂದ ಕೆ ಪಿ ಎಸ್ ಸಿ ಗೆ ಮಾಹಿತಿಯನ್ನ ಕೇಳಿದ್ದಾರೆ.

2015 gazetted probationers ಉತ್ತರ ಪತ್ರಿಕೆ ನಿಡುವಂತೆ ವಂಚಿತ ಅಭ್ಯರ್ಥಿಯಿಂದ ಸಿಎಂಗೆ ಪತ್ರ!

ಆದರೆ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್, ಕರ್ನಾಟಕ ಮಾಹಿತಿ ಆಯೋಗದ ತೀರ್ಪು ಇದ್ದರೂ ಮಾಹಿತಿ ಕೊಡದೆ ಇರುವ ಕೆ ಪಿ ಎಸ್ ಸಿ ಅವರು ಉದ್ದೇಶಪೂರ್ವಕವಾಗಿ ಮಾಹಿತಿನ್ನ ನೀಡುತ್ತಿಲ್ಲ ಎಂದು ವಂಚಿತ ಅಭ್ಯರ್ಥಿ ರಮೇಶ ತನಿಖೆದಾರ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂದೆ ಹೇಳಿಕ್ಕೊಂಡಿದ್ದಾರೆ. 

Video Top Stories