Asianet Suvarna News Asianet Suvarna News

ಲಾಕ್‌ಡೌನ್: ಗ್ರೀನ್‌ ಝೋನ್‌ನಲ್ಲಿರುವವರಿಗೆ ಗುಡ್‌ ನ್ಯೂಸ್ ನೀಡಿದ ಸರ್ಕಾರ..!

ಲಾಕ್‌ಡೌನ್‌ನಿಂದಾಗಿ ಹಳಿತಪ್ಪಿರುವ ಆರ್ಥಿಕತೆಗೆ ಟಾನಿಕ್ ನೀಡಲು ಸರ್ಕಾರ ಮುಂದಾಗಿದೆ. ಒಂದೂ ಕೊರೋನಾ ಪ್ರಕರಣಗಳಿಲ್ಲದ ಜಿಲ್ಲೆಗಳು ಗ್ರೀನ್ ಝೋನ್ ವ್ಯಾಪ್ತಿಗೆ ಬರುತ್ತವೆ. ನಿನ್ನೆ(ಸೋಮವಾರ) ಜಿಲ್ಲಾಧಿಕಾರಿಗಳ ಶಿಫಾರಸಿನಂತೆ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಇದೀಗ 14 ಜಿಲ್ಲೆಗಳಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರ ಅಸ್ತು ಎಂದಿದೆ.

ಬೆಂಗಳೂರು(ಏ.28): ಗ್ರೀನ್ ಝೋನ್‌ನಲ್ಲಿರುವವರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ರಾಜ್ಯದಲ್ಲಿರುವ ಸುಮಾರು ಅರ್ಧದಷ್ಟು ಜಿಲ್ಲೆಗಳು ಇದರ ಲಾಭ ಪಡೆಯಲಿವೆ. ಕೊರೋನಾ ಇಲ್ಲದ ಜಿಲ್ಲೆಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಗ್ರೀನ್ ಝೋನ್‌ನಲ್ಲಿರುವವರಿಗೆ ಮಾರ್ಗಸೂಚಿ ಪ್ರಕಟಗೊಂಡಿದೆ.

ಲಾಕ್‌ಡೌನ್‌ನಿಂದಾಗಿ ಹಳಿತಪ್ಪಿರುವ ಆರ್ಥಿಕತೆಗೆ ಟಾನಿಕ್ ನೀಡಲು ಸರ್ಕಾರ ಮುಂದಾಗಿದೆ. ಒಂದೂ ಕೊರೋನಾ ಪ್ರಕರಣಗಳಿಲ್ಲದ ಜಿಲ್ಲೆಗಳು ಗ್ರೀನ್ ಝೋನ್ ವ್ಯಾಪ್ತಿಗೆ ಬರುತ್ತವೆ. ನಿನ್ನೆ(ಸೋಮವಾರ) ಜಿಲ್ಲಾಧಿಕಾರಿಗಳ ಶಿಫಾರಸಿನಂತೆ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಇದೀಗ 14 ಜಿಲ್ಲೆಗಳಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರ ಅಸ್ತು ಎಂದಿದೆ.

ಕರ್ನಾಟಕದ ಗ್ರೀನ್ ಝೋನ್‌ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ?

ಶಿವಮೊಗ್ಗ ಸೇರಿದಂತೆ 14 ಜಿಲ್ಲೆಗಳು ಗ್ರೀನ್ ಝೋನ್ ವ್ಯಾಪ್ತಿಯಲ್ಲಿದ್ದು ಇದರ ಲಾಭ ಪಡೆಯಲಿವೆ. ಇನ್ನು ಹಾಟ್‌ಸ್ಪಾಟ್ ವ್ಯಾಪ್ತಿಗೆ ಬರುವ 8 ಜಿಲ್ಲೆಗಳಿಗೆ ಯಾವುದೇ ವಿನಾಯ್ತಿ ನೀಡಲಾಗಿಲ್ಲ. ಹಾಗಾದರೆ ಗ್ರೀನ್ ಝೋನ್‌ನಲ್ಲಿರುವವರಿಗೆ ಸರ್ಕಾರ ಯಾವೆಲ್ಲ ಗುಡ್ ನ್ಯೂಸ್ ನೀಡಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ. 

Video Top Stories