Asianet Suvarna News Asianet Suvarna News

ಕೊರೋನಾ ಅಟ್ಟಹಾಸ: 8 ಜಿಲ್ಲೆಗಳಲ್ಲಿ ಮತ್ತಷ್ಟು ಕಠಿಣವಾಗಲಿದೆ ಲಾಕ್‌ಡೌನ್..!

ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಕಲಬುರಗಿ, ವಿಜಯಪುರ, ಬಾಗಲಕೋಟೆ, ದಕ್ಷಿಣ ಕನ್ನಡ ಹಾಗೂ ಬೀದರ್ ಜಿಲ್ಲೆಗಳು ರೆಡ್‌ ಝೋನ್ ವ್ಯಾಪ್ತಿಯಲ್ಲಿದ್ದು, ಇಲ್ಲಿ ಲಾಕ್‌ಡೌನ್ ಮತ್ತಷ್ಟು ಟೈಟ್ ಆಗಲಿದೆ. 

ಬೆಂಗಳೂರು(ಏ.28): ರಾಜ್ಯ ಸರ್ಕಾರ ಇಂದು ಗ್ರೀನ್‌ ಝೋನ್‌ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಿಗೆ ರಿಲೀಫ್ ನೀಡಿದ್ದು ಕೈಗಾರಿಕೆ ಹಾಗೂ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಿದೆ. ಆದರೆ ರೆಡ್‌ ಝೋನ್‌ನಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. 

ಕೊರೋನಾ ವೈರಸ್ ಹೆಚ್ಚಿರುವ ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಕಲಬುರಗಿ, ವಿಜಯಪುರ, ಬಾಗಲಕೋಟೆ, ದಕ್ಷಿಣ ಕನ್ನಡ ಹಾಗೂ ಬೀದರ್ ಜಿಲ್ಲೆಗಳು ರೆಡ್‌ ಝೋನ್ ವ್ಯಾಪ್ತಿಯಲ್ಲಿದ್ದು, ಇಲ್ಲಿ ಲಾಕ್‌ಡೌನ್ ಮತ್ತಷ್ಟು ಟೈಟ್ ಆಗಲಿದೆ. 

ಅರ್ಧ ರಾಜ್ಯಕ್ಕೆ ರಿಲೀಫ್: ಇನ್ಮುಂದೆ ಗ್ರೀನ್‌ ಝೋನ್‌ಗಳಲ್ಲಿ ಏನಿರುತ್ತೆ? ಏನಿರಲ್ಲ?

ಇನ್ನುಳಿದಂತೆ ಅಂಗಡಿ-ಮುಂಗಟ್ಟು ತೆರೆಯುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ತೆಗೆದುಕೊಳ್ಳುವ ತೀರ್ಮಾನಗಳು ಅಂತಿಮವಾಗಲಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories