Asianet Suvarna News Asianet Suvarna News

ಮುಸ್ಲೀಮರ ಮೀಸಲಾತಿಗೆ ಕೊಕ್‌, ಸಿಎಂ ಕೊನೆಯ ಕ್ಯಾಬಿನೆಟ್‌ ಸಭೆಯಲ್ಲಿ ಮಹತ್ವದ ನಿರ್ಣಯ?

ಬಸವರಾಜ್‌ ಬೊಮ್ಮಾಯಿ ನೇತೃತ್ವದ ಕೊನೆಯ ಕ್ಯಾಬಿನೆಟ್‌ ಸಭೆಯಲ್ಲಿ ಮಹತ್ವದ ನಿರ್ಣಯವಾಗುವ ಸಾಧ್ಯತೆ ಇದೆ. ಮುಸ್ಲಿಮರ ಮೀಸಲಾತಿಗೆ ಕೊಕ್‌ ನೀಡುವ ಸಾಧ್ಯತೆ ದಟ್ಟವಾಗಿದೆ.
 

ಬೆಂಗಳೂರು (ಮಾ.24): ಬಸವರಾಜ್‌ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ತನ್ನ ಕೊನೆಯ ಕ್ಯಾಬಿನೆಟ್‌ ಸಭೆಯಲ್ಲಿ ಕ್ರಾಂತಿಕಾರಿ ನಿರ್ಣಯ ಮಾಡಲು ಮುಂದಾಗಿದೆ. ಮುಸ್ಲಿಂ ಮೀಸಲಾತಿಗೆ ಕೊಕ್‌ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ವರದಿಯಾಗಿದೆ.

ಸದ್ಯ ಕ್ಯಾಬಿನೆಟ್‌ ಸಭೆ ನಡೆಯುತ್ತಿದ್ದು, ಸಭೆಯ ಬಳಿಕ ಈ ನಿರ್ಧಾರ ಅಧಿಕೃತವಾಗುವ ಸಾಧ್ಯತೆ ಇದೆ. ಮುಂದಿನ ವಾರ ರಾಜ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ. ಹಾಗಾಗಿ ಮೀಸಲಾತಿಯ ಕಗ್ಗಂಟನ್ನು ಕೊನೆಯ ಸಭೆಯಲ್ಲಿ ಬ್ರೇಕ್‌ ಮಾಡಲು ಮುಂದಾಗಿದೆ.

ಪಂಚಮಸಾಲಿ ಮೀಸಲಾತಿ: ಸಂಪುಟ ಸಭೆಯಲ್ಲಿ ಇಂದು ತೀರ್ಮಾನ..!

ಬಿಜೆಪಿ ಸರ್ಕಾರದ ಕೊನೆಯ ಹಂತದಲ್ಲಿ ಸಿಎಂ ದೊಡ್ಡ ನಿರ್ಧಾರ ಮಾಡಲು ತೀರ್ಮಾನಿಸಿದ್ದಾರೆ. ಮುಸ್ಲಿಂ ಮೀಸಲಾತಿಗೆ ಕೊಕ್‌ ಕೊಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಪ್ರವರ್ಗ-1 ಹಾಗೂ ಪ್ರವರ್ಗ-2ರಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಇದೆ. ಆ ಮೀಸಲಾತಿಯನ್ನು ತೆಗೆದು ಅವರನ್ನು ಆರ್ಥಿಕ ಹಿಂದುಳಿದ ಸಮುದಾಯದಡಿ ಸೇರ್ಪಡೆ ಮಾಡಲು ಚರ್ಚೆ ನಡೆಯುತ್ತಿದೆ.