News Hour: ಸರ್ಕಾರಕ್ಕೆ ಕೇಸ್ ವಾಪಸ್ ಸಂಕಷ್ಟ!

ರಾಜ್ಯ ಸರ್ಕಾರ ದಿನಕ್ಕೆ ಒಂದರಂತೆ ವಿರೋಧ ಪಕ್ಷಗಳಿಗೆ ಬ್ರಹ್ಮಾಸ್ತ್ರ ನೀಡುತ್ತಿದೆ. ಹುಬ್ಬಳ್ಳಿ ಕೇಸ್‌ ಬಳಿಕ ಈಗ ಹೊಜಾಬ್‌ ಪರ ಪ್ರತಿಭಟನೆ ಮಾಡಿದ್ದ ಮುಸ್ಲಿಮರ ಮೇಲಿನ ಕೇಸ್‌ಅನ್ನು ವಾಪಾಸ್‌ ತೆಗೆದುಕೊಳ್ಳುವ ನಿರ್ಧಾರ ಮಾಡಿದೆ.
 

First Published Oct 14, 2024, 11:34 PM IST | Last Updated Oct 14, 2024, 11:34 PM IST

ಬೆಂಗಳೂರು (ಅ.14): ಸರ್ಕಾರಕ್ಕೆ ಹುಬ್ಬಳ್ಳಿ ಗಲಭೆ ಕೇಸ್​ ವಾಪಸ್​ ಸಂಕಷ್ಟ ಶುರುವಾಗಿದೆ. ಹಿಜಾಬ್ ಪರ ಪ್ರತಿಭಟಿಸಿದ್ದ ಮುಸ್ಲಿಮರ ಕೇಸ್ ವಾಪಸ್​ ತೆಗೆದುಕೊಳ್ಳಲಾಗಿದೆ. ಹಿಂದೂಗಳ ಕೇಸ್​ ಹಿಂಪಡೆಯದಿದ್ದಕ್ಕೆ ಕೇಸರಿಪಡೆ ಪ್ರತಿಭಟನೆ ಆರಂಭಿಸಿದೆ.

ಇನ್ನೊಂದೆಡೆ ಕೊಲೆ ಆರೋಪಿ ದರ್ಶನ್​, ಪವಿತ್ರಾಗೌಡಗೆ ಜಾಮೀನು ಸಿಕ್ಕಿಲ್ಲ. 57ನೇ ಸೆಷೆನ್ಸ್​ ಕೋರ್ಟ್‌ನಿಂದ ಜಾಮೀನು ಅರ್ಜಿ ವಜಾ ಮಾಡಲಾಗಿದೆ. 8ನೇ ಆರೋಪಿ ರವಿಶಂಕರ್​, 13ನೇ ಆರೋಪಿ ದೀಪಕ್​ಗೆ ಬೇಲ್ ಸಿಕ್ಕಿದೆ.

ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದ ಮಾಜಿ ಸಚಿವ; ಎಲ್ಲರೂ ಲೈನ್‌ಗೆ ಬರ್ತಾರೆ ಕಾದು ನೋಡಿ ಎಂದ ಹೆಚ್‌ಡಿ ರೇವಣ್ಣ!

ಸಿಎಂಗೆ ED ಟೆನ್ಷನ್​ ಮಧ್ಯೆ ಅಖಾಡಕ್ಕೆ ಹೈಕಮಾಂಡ್‌ ಇಳಿದಿದೆ. ನಾಳೆ ವೇಣುಗೋಪಾಲ್​ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ - ಬದಲಾವಣೆ ವದಂತಿಗೆ ರಾಹುಲ್‌ ಆಪ್ತ ಬ್ರೇಕ್‌ ಹಾಕ್ತಾರಾ ಎನ್ನವ ಪ್ರಶ್ನೆ ಎದ್ದಿದೆ.