Asianet Suvarna News Asianet Suvarna News

ಹಿಂದು ಅನ್ನೋದು ಅಶ್ಲೀಲ ಪದ, ಇದು ಪರ್ಷಿಯಾದಿಂದ ಬಂದಿದ್ದು: ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ!

ನಿಪ್ಪಾಣಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಹಿಂದು ಅನ್ನೋದು ಪರ್ಷಿಯನ್‌ ಭಾಷೆಯ ಪದ. ಭಾರತಕ್ಕೂ ಇರಾನ್‌ಗೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದಾರೆ.
 

ಚಿಕ್ಕೋಡಿ (ನ.7): ಹಿಂದೂ ಎನ್ನುವ ಶಬ್ದ ನಿಮ್ಮದಲ್ಲ. ಅದು ಪರ್ಷಿಯಾದಿಂದ ಬಂದಿದ್ದು. ಹಾಗೇನಾದರೂ ಹಿಂದು ಪದದ ಶಬ್ದ ಅರ್ಥವೇನಾದರೂ ತಿಳಿದರೇ ನೀವೇ ನಾಚಿಕೆಯಿಂದ ತಲೆ ತಗ್ಗಿಸ್ತೀರಾ. ಹಿಂದು ಎನ್ನುವ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಇದು ನಾನು ಹೇಳುತ್ತಿರೋದಲ್ಲ. ಈಗಾಗಲೇ ಸ್ವಾಮೀಜಿ ಕೂಡ ಹೇಳಿದ್ದಾರೆ. ಅದು ವೆಬ್‌ಸೈಟ್‌ಗಳಲ್ಲಿ ಕೂಡ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಮಾತು ವಿವಾದಕ್ಕೆ ಕಾರಣವಾಗಿದೆ.

ಹಿಂದು ಎನ್ನುವ ಪದ ಬಂದಿದ್ದಯ ಎಲ್ಲಿಂದ? ಇದು ಪರ್ಷಿಯಾದಿಂದ ಬಂದಿದ್ದು. ಅದಕ್ಕೂ ಭಾರತಕ್ಕೂ ಏನು ಸಂಬಂಧ? ಹಿಂದು ಎನ್ನುವುದು ನಿಮ್ಮದಾಗಿದ್ದು ಹೇಗೆ? ವಾಟ್ಸಾಪ್‌, ವಿಕಿಪೀಡಿಯಾ ಚೆಕ್‌ ಮಾಡಿ. ಹಿಂದು ಎನ್ನುವ ಪದ ನಿಮ್ಮದಲ್ಲ. ಹಾಗಿದ್ದಾಗ ಆ ಪದವನ್ನು ನೀವು ಇಷ್ಟು ಎತ್ತರದಲ್ಲಿ ಇಟ್ಟಿದ್ದೇಕೆ. ಇದರ ಅರ್ಥವೇ ಅಷ್ಟು ಕೆಟ್ಟದಾಗಿದೆ ಎಂದು ಅವರು ಹೇಳಿದ್ದಾರೆ.

"ಬಂಧುತ್ವ ಇಲ್ಲದ ಹಿಂದುತ್ವ ದೇಶಕ್ಕೆ ಅಪಾಯಕಾರಿ": ಜ್ಞಾನಪ್ರಕಾಶ ಸ್ವಾಮೀಜಿಯಿಂದ ಟೀಕೆ

ಶಿವಾಜಿ ಮಹಾರಾಜರ ಇತಿಹಾಸವನ್ನ ಮುಚ್ಚಿಡಲಾಗಿತ್ತು. ಯಾಕೆ ಇತಿಹಾಸವನ್ನ ಮುಚ್ಚಿಡಲಾಗಿತ್ತು ಅನ್ನೋದು ಚರ್ಚೆ ಆಗಿಲ್ಲ. ಮಹಾತ್ಮ ಫುಲೆ ಇಲ್ಲದಿದ್ದರೆ, ಇತಿಹಾಸ ಹೊರ ಬರುತ್ತಿರಲಿಲ್ಲ ಇತಿಹಾಸವನ್ನ ಮುಚ್ಚಿಡಲಾಗಿತ್ತು ಅದರ ಬಗ್ಗೆ ಈಗ ಚರ್ಚೆ ಆಗುತ್ತಿದೆ. ಶಿವಾಜಿ ಮಹಾರಾಜರಿಗೆ ಯುದ್ದದ ವೇಳೆ ಹಿಂದು, ಮರಾಠರು ಮಾತ್ರ ಸಲಹೆ ನೀಡಿಲ್ಲ ಮುಸ್ಲಿಮರು ಸಲಹೆ ನೀಡಿದ್ದರು ಎಂದು ಹೇಳಿದ್ದಾರೆ.

Video Top Stories