ಈದ್ಗಾ ವಿವಾದ: ಮೈದಾನದಲ್ಲಿರುವ ಈದ್ಗಾ ವಾಲ್ ತೆರವಿಗೆ ಹಿಂದೂ ಸಂಘಟನೆಗಳ ಆಗ್ರಹ

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಚಾಮರಾಜಪೇಟೆಯ ಆಟದ ಮೈದಾನದ ಮಾಲಿಕತ್ವದ ಗೊಂದಲಕ್ಕೆ ಬಿಬಿಎಂಪಿಯು ತೆರೆ ಎಳೆದಿದೆ. 

First Published Aug 7, 2022, 11:48 AM IST | Last Updated Aug 7, 2022, 1:30 PM IST

ಬೆಂಗಳೂರು (ಆ. 07): ತೀವ್ರ ವಿವಾದಕ್ಕೆ ಕಾರಣವಾಗಿದ್ದ ಚಾಮರಾಜಪೇಟೆಯ ಆಟದ ಮೈದಾನದ ಮಾಲಿಕತ್ವದ ಗೊಂದಲಕ್ಕೆ ಬಿಬಿಎಂಪಿಯು ತೆರೆ ಎಳೆದಿದೆ. ಮೈದಾನವು ಕಂದಾಯ ಇಲಾಖೆಗೆ ಸೇರಿದ್ದು ಎಂದು ಸ್ಪಷ್ಟಪಡಿಸಿ ಆದೇಶಿಸಿರುವ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್‌, ಮೈದಾನದ ಜಾಗಕ್ಕೆ ಸಂಬಂಧಿಸಿದ ಖಾತಾ ಮಾಡಿಕೊಡುವಂತೆ ಕೋರಿ ಸಲ್ಲಿಸಿದ್ದ ವಕ್ಫ್ ಮಂಡಳಿಯ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಪಿಎಸ್‌ಐ ಅಕ್ರಮ ನೇಮಕಾತಿ: ಅಮೃತ್ ಪೌಲ್‌ಗೆ ಮಾನಸಿಕ ಖಿನ್ನತೆ, ಜೈಲ್‌ನಲ್ಲಿ ರಂಪಾಟ

'ಇದು ಸಂಪೂರ್ಣ ನಾವು ಗೆದ್ದಂತಾಗುವುದಿಲ್ಲ. ಮೈದಾನದಲ್ಲಿರುವ ಈದ್ಗಾ ವಾಲ್ ತೆರವುಗೊಳಿಸಬೇಕು. ಸರ್ವಧರ್ಮೀಯರಿಗೂ ಅವಕಾಶ ಮಾಡಿಕೊಡಬೇಕು. ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆ ಅವಕಾಶ ಮಾಡಿಕೊಡಬೇಕು' ಎಂದು ಸಾಮಾಜಿಕ ಹೋರಾಟಗಾರ ಭಾಸ್ಕರನ್ ಹೇಳಿದ್ದಾರೆ.