
ಹಿಜಾಬ್ ಇಲ್ಲದಿದ್ದರೆ ರೇಪ್ ಹೆಚ್ಚುತ್ತವೆ ಎಂದಿದ್ದ ಶಾಸಕ ಜಮೀರ್ ಕ್ಷಮೆಯಾಚನೆ ಹಿಂದಿದೆ ಈ ಸೀಕ್ರೆಟ್!
ಹಿಜಾಬ್, ಬುರ್ಖಾ ಧರಿಸದಿದ್ದರೆ ಅತ್ಯಾಚಾರಗಳು (Rape) ಹೆಚ್ಚಾಗುತ್ತವೆ ಎಂಬರ್ಥದ ಹೇಳಿಕೆಯನ್ನು ಶಾಸಕ ಜಮೀರ್ ಖಾನ್ (Zameer Khan)ಇತ್ತೀಚಿಗೆ ಹೇಳಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಸರಣಿಯಾಗಿ ಕಿಡಿಕಾರಿದ್ದರು.
ಬೆಂಗಳೂರು (ಫೆ. 16): ಹಿಜಾಬ್, ಬುರ್ಖಾ ಧರಿಸದಿದ್ದರೆ ಅತ್ಯಾಚಾರಗಳು (Rape) ಹೆಚ್ಚಾಗುತ್ತವೆ ಎಂಬರ್ಥದ ಹೇಳಿಕೆಯನ್ನು ಶಾಸಕ ಜಮೀರ್ ಖಾನ್ (Zameer Khan)ಇತ್ತೀಚಿಗೆ ಹೇಳಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಸರಣಿಯಾಗಿ ಕಿಡಿಕಾರಿದ್ದರು. ಜೊತೆಗೆ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar), ಜಮೀರ್ ಅಹಮದ್‌ಖಾನ್ ಹೇಳಿಕೆ ಹಿಂಪಡೆದು ಜನರ ಕ್ಷಮೆ ಕೋರಬೇಕು ಎಂದು ಬಹಿರಂಗವಾಗಿ ತಾಕೀತು ಮಾಡಿದ್ದರು. ಆದರೆ, ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಜಮೀರ್ ಅಹಮದ್ ಖಾನ್, ‘ನಾನು ಕ್ಷಮೆ ಕೋರಲ್ಲ, ಕ್ಷಮೆ ಕೋರಲು ನಾನೇನು ತಪ್ಪು ಹೇಳಿಕೆ ನೀಡಿದ್ದೇನೆ?’ ಎಂದು ಖಾರವಾಗಿ ಪ್ರಶ್ನಿಸಿದ್ದರು.
Hijab Row: ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ, ಹಿಜಾಬ್ ತೆಗೆಯಲ್ಲ, ಮುಂದುವರೆದ ಗದ್ದಲ
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಜಮೀರ್‌ಗೆ ನೇರವಾಗಿ ದೂರವಾಣಿ ಕರೆ ಮಾಡಿ ಈ ವಿಚಾರದಲ್ಲಿ ಕ್ಷಮೆ ಕೋರದಿದ್ದರೆ ಪಕ್ಷಕ್ಕೆ ಹಾನಿಯಾಗುತ್ತದೆ. ಇದು ಅಶಿಸ್ತು ಹೀಗಾಗಿ ಕ್ಷಮೆ ಕೋರಲೇ ಬೇಕು ಎಂದು ತಾಕೀತು ಮಾಡಿದರು ಎನ್ನಲಾಗಿದೆ. ತಕ್ಷಣ ಜಮೀರ್, ಯಾರ ಮನಸ್ಸನ್ನೂ ನೋಯಿಸುವ ಅಥವಾ ಅಗೌರವ ತೋರಿಸುವ ದುರುದ್ದೇಶದಿಂದ ನಾನು ಆ ರೀತಿ ಹೇಳಿಲ್ಲ. ಹೆಣ್ಣು ಮಕ್ಕಳ ಕಾಳಜಿಯ ಸದುದ್ದೇಶದಿಂದ ಹೇಳಿರುವ ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ.