
Hijab Case: ವಿಸ್ತ್ರತ ಪೀಠದಿಂದಲೂ ಉತ್ತಮ ಆದೇಶ ಬರುವ ನಿರೀಕ್ಷೆ ಇದೆ: ಯಶ್ಪಾಲ್ ಸುವರ್ಣ
ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್ ವಿಚಾರವಾಗಿ ವಿಜಯಪುರದಲ್ಲಿ ಯಶ್ಪಾಲ್ ಸುವರ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸುಪ್ರೀಂ ಕೋರ್ಟ್ ನಿಂದ ಆರಂಭಿಕ ಜಯ ಸಿಕ್ಕಿದೆ, ಹಿಜಾಬ್ ವಿದ್ಯಾರ್ಥಿನಿಯರು ಬಡವಿದ್ಯಾರ್ಥಿಗಳ ದಿಕ್ಕು ತಪ್ಪಿಸಿದ್ದರು, ಶಿಕ್ಷಣದ ವ್ಯವಸ್ಥೆ ಹಾಳು ಮಾಡಿದ್ದರು ಎಂದು ಕಿಡಿಕಾರಿದ್ದಾರೆ.
ವಿಜಯಪುರ (ಅ.13): ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್ ವಿಚಾರವಾಗಿ ಭಿನ್ನ ತೀರ್ಪು ಬಂದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಯಶ್‌ಪಾಲ್ ಸುವರ್ಣ, ಶಿಕ್ಷಣದ ವ್ಯವಸ್ಥೆಯನ್ನೇ ಈ ವಿದ್ಯಾರ್ಥಿಗಳು ಹಾಳು ಮಾಡಿದ್ದಾರೆ. ಇದು ಸುಪ್ರೀಂ ಕೋರ್ಟ್‌ನಲ್ಲಿ ಸಿಕ್ಕ ಆರಂಭಿಕ ಜಯ ಎಂದು ಹೇಳಿದ್ದಾರೆ.
ದೇಶದ್ರೋಹಿ ಹಾಗೂ ಮತಾಂಧ ಸಂಘಟನೆಗಳು ಮಾರ್ಚ್ 15 ರಂದು ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಒಬ್ಬ ನ್ಯಾಯಮೂರ್ತಿ ಸರ್ಕಾರ ನಿರ್ಧಾರದ ಸರಿ ಎಂದಿದ್ದರೆ, ಇನ್ನೊಬ್ಬರು ತಪ್ಪು ಎಂದಿದ್ದಾರೆ. ಈಗ ವಿಸ್ತ್ರತ ಪೀಠಕ್ಕೆ ಪ್ರಕರಣ ಹೋಗಲಿದ್ದು, ಮುಂದೆಯೂ ಉತ್ತಮ ಆದೇಶ ಬರುವ ನಿರೀಕ್ಷೆ ಇದೆ ಎಂದಿದ್ದಾರೆ.
Hijab Case: ಹಿಜಾಬ್ ವಿದ್ಯಾರ್ಥಿನಿಯರಿಗೆ ಟೆರರ್ ಲಿಂಕ್ ಇದೆ: ಈಶ್ವರಪ್ಪ
ಮಕ್ಕಳ ಜೀವನದಲ್ಲಿ ಇವರೆಲ್ಲಾ ಚೆಲ್ಲಾಟವಾಡಿದ್ದಾರೆ. ಆ ಆರು ವಿದ್ಯಾರ್ಥಿನಿಯರ ನಾಟಕದಿಂದ ಇಷ್ಟೆಲ್ಲಾ ಸಮಸ್ಯೆ ಎದುರಾಗಿದೆ. ಹೈಕೋರ್ಟ್ ತೀರ್ಪು ಬಂದಾಗ ಅದು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿ ಮಾಡಿರುವ ತೀರ್ಪಲ್ಲ ಎಂದು ಸುವರ್ಣ ಹೇಳಿದ್ದಾರೆ.