Asianet Suvarna News Asianet Suvarna News

ತಿಂಗಳೊಳಗೆ ಗುತ್ತಿಗೆ ವೈದ್ಯರ ಉದ್ಯೋಗ ಖಾಯಂ : ಆರೋಗ್ಯ ಸಚಿವರಿಂದ ಭರವಸೆ

ಗುತ್ತಿಗೆ ವೈದ್ಯರ ಖಾಯಂ ಮಾಡುವ ವಿಚಾರ ಇನ್ನೂ ಬಗೆಹರಿದಿಲ್ಲ. ಸಿಎಂ ಭೇಟಿಗೆ 150 ಕ್ಕೂ ಹೆಚ್ಚು ವೈದ್ಯರು ಆಗಮಿಸಿದ್ದಾರೆ. ಕುಮಾರಕೃಪಾ ಗೆಸ್ಟ್‌ ಹೌಸ್ ಬಳಿ ಪೊಲೀಸರು ವೈದ್ಯರನ್ನು ತಡೆದಿದ್ದಾರೆ. ನಿನ್ನೆ ಸಭೆಯಲ್ಲಿ ಉದ್ಯೋಗ ಭದ್ರತೆ ಬಗ್ಗೆ ಮಾತುಕತೆ ನಡೆದಿದೆ. ಆದರೆ ಯಾವಾಗ, ಏನು ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. 

ಬೆಂಗಳೂರು (ಜು. 08): ಗುತ್ತಿಗೆ ವೈದ್ಯರ ಖಾಯಂ ಮಾಡುವ ವಿಚಾರ ಇನ್ನೂ ಬಗೆಹರಿದಿಲ್ಲ. ಸಿಎಂ ಭೇಟಿಗೆ 150 ಕ್ಕೂ ಹೆಚ್ಚು ವೈದ್ಯರು ಆಗಮಿಸಿದ್ದಾರೆ. ಕುಮಾರಕೃಪಾ ಗೆಸ್ಟ್‌ ಹೌಸ್ ಬಳಿ ಪೊಲೀಸರು ವೈದ್ಯರನ್ನು ತಡೆದಿದ್ದಾರೆ. ನಿನ್ನೆ ಸಭೆಯಲ್ಲಿ ಉದ್ಯೋಗ ಭದ್ರತೆ ಬಗ್ಗೆ ಮಾತುಕತೆ ನಡೆದಿದೆ. ಆದರೆ ಯಾವಾಗ, ಏನು ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. 

ನರ್ಸ್, ಆಶಾ ಕಾರ್ಯಕರ್ತೆಯರ‌ ಸೇವೆ ಶ್ಲಾಘಿಸಿದ ಸಚಿವ ಶ್ರೀರಾಮುಲು

ಆರೋಗ್ಯ ಸಚಿವ ಶ್ರೀ ರಾಮುಲು ವೈದ್ಯರ ಜೊತೆ ಸಮಾಲೋಚನೆ ನಡೆಸಿ, ನಾಳೆ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ. ಕೋವಿಡ್ ಸಮಯದಲ್ಲಿ ನೀವೆಲ್ಲಾ ವಾರಿಯರ್‌ ಆಗಿ ದುಡಿದಿದ್ದೀರಿ. ನಿಮಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ. ಒಂದು ತಿಂಗಳೊಳಗೆ ಆದೇಶ ಪತ್ರ ಕೈಗೆ ಸಿಗುವಂತೆ ಮಾಡುತ್ತೇವೆ' ಎಂದು ಆಶ್ವಾಸನೆ ನೀಡಿದ್ದಾರೆ.