Karnataka Budget 2023: ಗೂಬೆ ಕೂರಿಸುವ, ಜನರ ತಲೆ ಮೇಲೆ ಹೂವ ಇಡೋ ಬಜೆಟ್: ಎಚ್‌ಡಿಕೆ ರಿಯಾಕ್ಷನ್

ಕಳೆದ ಬಾರಿ  ಬೊಮ್ಮಾಯಿ ಬಜೆಟ್‌ ಮಂಡಿಸುವಾಗ ಕಿವಿಗೆ ಚೆಂಡು ಹೂವು ಇಟ್ಕೊ ಬಂದವರೇ, ಇವತ್ತು  ಕನ್ನಡನಾಡಿನ ಜನರ ತಲೆ ಮೇಲೆ ಹೂವ ಇಡುತ್ತಿದ್ದಾರೆ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು.7): ಕಳೆದ ಬಾರಿ ಬೊಮ್ಮಾಯಿ ಬಜೆಟ್‌ ಮಂಡಿಸುವಾಗ ಕಿವಿಗೆ ಚೆಂಡು ಹೂವು ಇಟ್ಕೊ ಬಂದವರೇ, ಇವತ್ತು ಕನ್ನಡನಾಡಿನ ಜನರ ತಲೆ ಮೇಲೆ ಹೂವ ಇಡುತ್ತಿದ್ದಾರೆ. ಈ ಬಜೆಟ್‌ನಲ್ಲಿ ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸೋದು ಬಿಟ್ಟು ಏನಿಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಕಟ್ ಆ್ಯಂಡ್ ಪೇಸ್ಟ್ ಬಜೆಟ್. ಕೇಂದ್ರದ ನರೇಂದ್ರ ಮೋದಿ ಅವರ ಸರಕಾರ, ಹಿಂದಿನ ಬಿಜೆಪಿ ಸರಕಾರವನ್ನು ನಿಂದಿಸಲು ಮೀಸಲಾದ ಬಜೆಟ್ ಹಾಗೂ ರಾಜಕೀಯ ಹೇಳಿಕೆಗಳಿಗೆ ಸೀಮಿತವಾದ ಬಜೆಟ್. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಜನತೆಯ ಬಹು ನಿರೀಕ್ಷಿತ ಆಶೋತ್ತರದೊಂದಿಗೆ ರಚನೆ ಆಗಿರುವ ಸರ್ಕಾರ ಮುಂದಿನ ಎಂಟು ತಿಂಗಳಿಗೆ ಬಜೆಟ್ ಮಂಡಿಸಿದೆ ಎಂದಿದ್ದಾರೆ. 

Related Video