
ರಾಮನ ಹೆಸರಿನಲ್ಲಿ ರಾವಣ ರಾಜ್ಯ ಮಾಡಲು ಹೊರಟವರಿಂದ ಕಲಿಯಬೇಕಿಲ್ಲ: ಮುತಾಲಿಕ್‌ಗೆ ಎಚ್‌ಡಿಕೆ ಟಾಂಗ್
ರಾಜ್ಯದಲ್ಲಿ ಬುಲ್ಡೋಜರ್ ಮಾದರಿ ಆಡಳಿತ ಎಂಬ ಮುತಾಲಿಕ್ ಹೇಳಿಕೆಗೆ ಎಚ್‌ಡಿಕೆ ಟಾಂಗ್ ನೀಡಿದ್ದಾರೆ.
ಬೆಂಗಳೂರು (ಏ. 18):ಹುಬ್ಬಳ್ಳಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಬುಲ್ಡೋಜರ್ ಮಾದರಿ ಆಡಳಿತ ಎಂಬ ಮುತಾಲಿಕ್ (Pramod Mutalik) ಹೇಳಿಕೆಗೆ ಎಚ್‌ಡಿಕೆ (HD Kumaraswamy) ಟಾಂಗ್ ನೀಡಿದ್ದಾರೆ.
'ಉಳಿದವರಿಗೆಲ್ಲಾ 40 % ಕಮಿಷನ್, ಕಾವಿಗಳಿಗೆ 30 % ಕಮಿಷನ್, 10 % ಡಿಸ್ಕೌಂಟ್'
'ರಾಮನ ಹೆಸರಲ್ಲಿ ರಾವಣ ರಾಜ್ಯ ಮಾಡಲು ಹೊರಟಿದ್ದಾರೆ. ನಿಮ್ಮಂತವರಿಂದ ನಾನು ಕಲಿಯಬೇಕಿಲ್ಲ. ಕತ್ತಿ ಹಿಡಿದುಕೊಂಡು ರಾಮನ ಹೆಸರನ್ನು ಉಳಿಸೋದಲ್ಲ. ಉತ್ತರ ಪ್ರದೇಶ, ಗುಜರಾತ್ ಮಾದರಿ ಆಡಳಿತ ಅವಶ್ಯಕತೆ ಇಲ್ಲ. ಕರ್ನಾಟಕದ ಆಡಳಿತ ವಿಶ್ವಕ್ಕೆ ಮಾದರಿಯಾಗಿದೆ. ಸಿಎಂ ಎಲ್ಲಾ ಧರ್ಮದ ಮುಖಂಡರ ಸಭೆ ಕರೆಯಲಿ' ಎಂದಿದ್ದಾರೆ.