Asianet Suvarna News Asianet Suvarna News

Karnataka Politics: ಡಿಕೆಶಿ ಜೊತೆ ಆನಂದ್ ಸಿಂಗ್, ಕಾಲವೇ ಉತ್ತರಿಸುತ್ತೆ: ಸಲೀಂ ಅಹ್ಮದ್

ಕೆಪಿಸಿಸಿ (KPCC) ಕಾರ್ಯಾದ್ಯಕ್ಷ ಸಲೀಂ ಅಹ್ಮದ್ (Salim Ahmad)  ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ, ಕೆಲವು ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು. ಮೇಕೆದಾಟುವಿನಿಂದ (Mekwdatu) ಬೆಂಗಳೂರುವರೆಗೆ (Bengaluru) ಪಾದಯಾತ್ರೆ ಮಾಡಲಿದ್ದೇವೆ. ಮೇಕೆದಾಟು ಹೋರಾಟದ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಯಾವುದೇ ಗೊಂದಲ ಇಲ್ಲ ಎಂದರು. 
 

ಹಾವೇರಿ (ಜ. 01): ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹ್ಮದ್  ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ, ಕೆಲವು ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು.  ' ಸ್ಥಳೀಯ  ಸಂಸ್ಥೆಗಳ ಚುನಾವಣೆಗಳಲ್ಲಿ ಜನ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಬಿಜೆಪಿಗೆ ಜನ ತಕ್ಕ ಉತ್ತರ ನೀಡಿದ್ದಾರೆ. ಬಿಜೆಪಿ ಆಡಳಿತದಿಂದ ಜನ ಭ್ರಮ ನಿರಸ ಆಗಿದ್ದಾರೆ. ತಾ.ಪಂ ಜಿ.ಪಂ  ಚುನಾವಣೆಯಲ್ಲೂ ಕೂಡಾ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ. ಮುಂದಿನ ವಿಧಾನಸಭಾ  ಚುನಾವಣೆಯಲ್ಲಿ ಜನ  ಕಾಂಗ್ರೆಸ್ 150 ಸೀಟ್ ಗೆಲ್ಲಲಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಭ್ರಷ್ಟಾಚಾರ ತಡೆಯಲು ಬಿಜೆಪಿ ಸರ್ಕಾರ ವಿಫಲವಾಗಿದೆ. ಸರ್ಕಾರದ ಮಂತ್ರಿಗಳು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ಕಾಂಟ್ರಾಕ್ಟರ್  ಗಳು ಮೋದಿಗೆ ಪತ್ರ ಬರೆದಿದ್ದಾರೆ. ಆದರೆ ಪ್ರಧಾನಿಗಳ ಕಾರ್ಯಾಲಯದಿಂದ ಯಾವುದೇ ಉತ್ತರ ನೀಡಿಲ್ಲ. ನ ಖಾವೂಂವಾ , ನ ಖಾನೆ ದೂಂಗಾ ಅನ್ನೋ ಪ್ರೈಮ್ ಮಿನಿಸ್ಟರ್ ಇದನ್ನ ತನಿಖೆಯನ್ನೇ ನಡೆಸಿಲ್ಲ. ಸಚಿವ ಭೈರತಿ ಬಸವರಾಜ ಮೇಲೆ ಭೂ ಹಗರಣದ ಆರೋಪ ಕೂಡಾ ಬಂದಿದೆ.  ಆ ಮಂತ್ರಿ ರಾಜೀನಾಮೆ ನೀಡಿಲ್ಲ. ಈ ಬಗ್ಗೆ ಸಿಎಂ ಯಾವುದೇ ರೀತಿ ಉತ್ತರ ನೀಡಿಲ್ಲ'' ಎಂದರು.

Mahadayi: ಅಧಿಕಾರಿಗಳ ನಿರ್ಲಕ್ಷ್ಯ, ಮಹದಾಯಿ ನೀರು ತರುವಲ್ಲಿ ವಿಳಂಬ, ಮತ್ತೆ ಹೋರಾಟ 

ಮೇಕೆದಾಟುವಿನಿಂದ ಬೆಂಗಳೂರು ವರೆಗೆ ಪಾದಯಾತ್ರೆ ಮಾಡಲಿದ್ದೇವೆ. ಮೇಕೆದಾಟು ಹೋರಾಟದ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಯಾವುದೇ ಗೊಂದಲ ಇಲ್ಲ ಎಂದರು. 

'ಸಾಕಷ್ಟು ಜನ ಬಿಜೆಪಿಯವರು ,ಜನತಾದಳದವರು ಕಾಂಗ್ರೆಸ್ ಸೇರ್ಪಡೆಗೆ ತಯಾರಾಗಿದ್ದಾರೆ.  ಸೂಕ್ತ ಸಂದರ್ಭದಲ್ಲಿ ಅವರ ಅರ್ಜಿ ಹೈಕಮಾಂಡ್ ಗೆ ಕಳಿಸಿಕೊಡ್ತೀವಿ. ಸೇರಿಸಿಕೊಳ್ಳುವ ಬಗ್ಗೆ ಕಮಿಟಿ ತೀರ್ಮಾನ ಮಾಡಲಿದೆ. ಇನ್ನು ಡಿಕೆಶಿ ಜೊತೆ ಆನಂದ್ ಸಿಂಗ್ ನಿರಂತರ ಸಂಪರ್ಕ ವಿಚಾರವಾಗಿ,  ಕಾಲಗರ್ಭದಲ್ಲಿ ಏನೇನು ಅಡಗಿದೆಯೋ ಯಾರಿಗೆ ಗೊತ್ತಿಲ್ಲ ಎಂದರು. 

Video Top Stories