ಹುಬ್ಬಳ್ಳಿ ಪೊಲೀಸ್ ಠಾಣಾ ಮಹಿಳಾ ಸಿಬ್ಬಂದಿಗೆ ಇನ್ಸ್‌ಸ್ಪೆಕ್ಟರ್‌ನಿಂದ ಲೈಂಗಿಕ ಕಿರುಕುಳ?

ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ಯಳ್ಳೂರು ವಿರುದ್ಧ ಮಹಿಳಾ ಪೊಲೀಸ್ ಸಿಬ್ಬಂದಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ವಿಡಿಯೋ ಕರೆಗಳ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ ಮತ್ತು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ.

Share this Video
  • FB
  • Linkdin
  • Whatsapp

ಹುಬ್ಬಳ್ಳಿ (ಡಿ.17): ಮಹಿಳಾ ಪೊಲೀಸ್​ ಸಿಬ್ಬಂದಿಗೆ ಪೊಲೀಸ್ ಇನ್ಸ್​ಪೆಕ್ಟರ್​ ಲೈಂಗಿಕ ಕಿರುಕುಳ ಬಗ್ಗೆ ಆರೋಪ ಕೇಳಿಬಂದಿದೆ. ಹಳೆಹುಬ್ಬಳ್ಳಿ ಠಾಣೆ SI ಸುರೇಶ್ ವಿರುದ್ಧ ವಿಡಿಯೋ ಕಾಲ್ ಮಾಡಿ ಕಿರುಕುಳ ಕೊಟ್ಟಿರುವ ಆರೋಪ ಕೇಳಿಬಂದಿದೆ. SI​ ಸುರೇಶ್ ಯಳ್ಳೂರು ವಿರುದ್ಧಮಹಿಳಾ ಆಯೋಗ, ಮಾನವ ಹಕ್ಕು , ಸಿಎಂಗೆ ಪತ್ರ ಬರೆಯಲಾಗಿದೆ.

ಹಳೆಹುಬ್ಬಳ್ಳಿ ಠಾಣೆ ಸಬ್ ಇನ್ಸ್‌ಸ್ಪೆಕ್ಟರ್ ಸುರೇಶ್ ವಿರುದ್ಧ ಆರೋಪ ಕೇಳಿಬಂದಿದೆ. ಮಹಿಳಾ ಆಯೋಗ, ಮಾನವ ಹಕ್ಕು ಹಾಗೂ ರಾಜ್ಯದ ಮುಖ್ಯಮಂತ್ರಿಗೂ ಪತ್ರವನ್ನು ಬರೆಯಲಾಗಿದೆ. ಇನ್ನು ಆರೋಪಿ ಸಬ್ ಇನ್ಸ್‌ಸ್ಪೆಕ್ಟರ್ ​ಸುರೇಶ್ ಯಳ್ಳೂರು ವಿರುದ್ಧ 3 ಪುಟಗಳ ದೂರು ನೀಡಲಾಗಿದೆ. ನಮ್ಮನ್ನು ಈ ಇನ್ಸ್‌ಸ್ಪೆಕ್ಟರ್ ಕಿರುಕುಳದಿಂದ ಮುಕ್ತಿ ಮಾಡುವಂತೆ ಮಹಿಳಾ ಸಿಬ್ಬಂದಿ ಮನವಿ ಮಾಡಿದ್ದಾರೆ. ಮೂರು ಪುಟಗಳಲ್ಲಿ ಇನ್ಸ್‌ಸ್ಪೆಕ್ಟರ್ ಸುರೇಶ್​ ಕಿರುಕುಳವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇನ್ನು ಠಾಣೆಯಲ್ಲಿ ನಾವು ಕೆಲಸ ಮಾಡುವಾಗ ಸರ್ಕಾರದಿಂದ ಕೊಡಲಾಗಿರುವ ರಜೆಯನ್ನು ಕೇಳಿದರೆ ನನ್ನ ಸೌಂದರ್ಯದ ಬಗ್ಗೆ ಮಾತನಾಡುತ್ತಾರೆ. ಇನ್ನು ನಾನು ಮನೆಗೆ ಹೋಗುತ್ತಿದ್ದಂತೆ ಹಾಗೂ ರಾತ್ರಿ ಆಗುತ್ತಿದ್ದಂತೆಯೇ ನನಗೆ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸುತ್ತಾರೆ. ಇದರಿಂದಾಗಿ ನಮ್ಮ ಕುಟುಂಬದಲ್ಲಿ ಬಿರುಕು ಮೂಡಿದೆ. ಇದೀಗ ನನ್ನ ಕೆಲಸದ ಸ್ಥಳದಲ್ಲಿ ನಡೆಯುತ್ತಿರುವ ಕಿರುಕುಳದಿಂದಾಗಿ ಇಡೀ ಜೀವನವೇ ಹಾಳಾಗುತ್ತಿದೆ ಎಂದು ಪತ್ರದ ಮೂಲಕ ಅಳಲು ತೋಡಿಕೊಂಡಿದ್ದಾರೆ.

Related Video