ನೆರೆ ಕಾರ್ಯಕ್ಕೆ ಬನ್ನಿ ಅಂದ್ರೆ ಕೊರೋನಾ ನೆಪ, ಬೈಎಲೆಕ್ಷನ್‌ಗೆ ಹಾಜರ್ ಉಸ್ತುವಾರಿ ಸಚಿವರು!

ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದ ಜನ ತತ್ತರಿಸಿ ಹೋಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಕ್ಯಾರೇ ಎನ್ನುತ್ತಿಲ್ಲ.  ಜನರು ಪರದಾಡುತ್ತಿದ್ದರೂ ಜಿಲ್ಲೆಗಳಿಗೆ ಮಾತ್ರ ಭೇಟಿ ನೀಡಿಲ್ಲ. ಹಾಗಾದರೆ ಉಸ್ತುವಾರಿ ಸಚಿವರು ಎಲ್ಲಿದ್ಧಾರೆ? ಜನರ ಕಷ್ಟ ಅರ್ಥ ಆಗುತ್ತಿಲ್ವಾ? ಎಂದು ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ. 

First Published Oct 17, 2020, 2:46 PM IST | Last Updated Oct 17, 2020, 3:41 PM IST

ಬೆಂಗಳೂರು (ಅ. 17): ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದ ಜನ ತತ್ತರಿಸಿ ಹೋಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಕ್ಯಾರೇ ಎನ್ನುತ್ತಿಲ್ಲ.  ಜನರು ಪರದಾಡುತ್ತಿದ್ದರೂ ಜಿಲ್ಲೆಗಳಿಗೆ ಮಾತ್ರ ಭೇಟಿ ನೀಡಿಲ್ಲ. ಹಾಗಾದರೆ ಉಸ್ತುವಾರಿ ಸಚಿವರು ಎಲ್ಲಿದ್ಧಾರೆ? ಜನರ ಕಷ್ಟ ಅರ್ಥ ಆಗುತ್ತಿಲ್ವಾ? ಎಂದು ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ. 

'ನೆರೆ ಬಂದಿದೆ, ಜಿಲ್ಲೆಯಲ್ಲಿ ಇರೋದ್ ಬಿಟ್ಟು ಕಾರಜೋಳರು ಮೆರವಣಿಗೆ ಮಾಡ್ಕಂಡು ಕುಂತವ್ರೇ'

ಕಲ್ಬುರ್ಗಿಯಲ್ಲಿ ಕಳೆದ 20 ದಿನಗಳಿಂದ ಮಳೆಯಾಗುತ್ತಿದೆ. ಪ್ರವಾಹ ಬಂದಿದೆ. ಜನರು ಕಷ್ಟದಲ್ಲಿದ್ದಾರೆ. ಆದರೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತ್ರ ಹತ್ತಿರಕ್ಕೂ ಸುಳಿದಿಲ್ಲ. ನಿನ್ನೆ ಇಡೀ ಶಿರಾದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ. ಆದರೆ ಜಿಲ್ಲೆಗೆ ಬರಲು ಮಾತ್ರ ಆರೋಗ್ಯ ಸಮಸ್ಯೆ ಅಂತೆ! ಕೊರೊನಾದಿಂದ ಬಳಲುತ್ತಿದ್ದೇನೆ. ಜಿಲ್ಲೆಯ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ಹೇಳುತ್ತಾರೆ.