ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಇನ್ಮುಂದೆ ಎಲ್ಲಾ ವಿಷಯಗಳಿಗೂ ಇಂಟರ್ನಲ್ ಮಾರ್ಕ್ಸ್..!

ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೂ ಇನ್ಮುಂದೆ ಇಂಟರ್ನಲ್ ಮಾರ್ಕ್ಸ್ ಕೊಡಲು ನಿರ್ಧರಿಸಲಾಗಿದೆ.
 

First Published Jul 13, 2023, 11:52 AM IST | Last Updated Jul 13, 2023, 11:52 AM IST

ರಾಜ್ಯ ಸರ್ಕಾರವು ಪಿಯುಸಿ ತರಗತಿಗಳಿಗೆ ಹೊಸ ಅಂಕ‌ ಮಾದರಿ‌ ಜಾರಿ ಮಾಡಿದೆ. ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೂ ಇನ್ನು ಮುಂದೆ ಆಂತರಿಕ ಅಂಕ (ಇಂಟರ್ನಲ್ ಮಾರ್ಕ್ಸ್) ನೀಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಥಮ ಮತ್ತು ದ್ವಿತಿಯ ಪಿಯುಸಿ ಎರಡು ತರಗತಿಗಳಿಗೆ ಈ ಹೊಸ ನಿಯಮ ಅನ್ವಯವಾಗಲಿದೆ. ಪ್ರಾಯೋಗಿಕ ಪರೀಕ್ಷೆ ಹೊಂದಿರದ ವಿಷಯಗಳಿಗೆ ಇನ್ಮುಂದೆ 20 ಅಂಕ ಆಂತರಿಕ ಅಂಕ ನೀಡಲು‌ ನಿರ್ಧಾರ ಮಾಡಲಾಗಿದೆ. ಮೊದಲು ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ 100 ಅಂಕಕ್ಕೆ ಪರೀಕ್ಷೆ ಬರೆಯಬೇಕಿತ್ತು. ಈಗ ಈ ನಿಯಮ ಬದಲಾವಣೆ ಮಾಡಿ, 20 ಆಂತರಿಕ ಅಂಕ & 80 ಅಂಕ ಥಿಯರಿ ಪರೀಕ್ಷೆಗೆ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.