ಆಶ್ರಮದಲ್ಲಿದ್ದ ಯುವತಿ ನಾಪತ್ತೆ! ಮತ್ತೊಂದು ನಿತ್ಯಾ ಪುರಾಣ ಬಯಲಿಗೆ

ಸೂರ್ಯನನ್ನು ಹತೋಟಿಯಲ್ಲಿಟ್ಟು ಇತ್ತೀಚೆಗೆ ನಗೆಪಾಟಲಿಗೆ ಈಡಾಗಿದ್ದ ಸ್ವಘೋಷಿತ ದೇವಮಾನವ ನಿತ್ಯಾನಂದನ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಆಶ್ರಮದಲ್ಲಿದ್ದ 18 ವರ್ಷ ಪ್ರಾಯದ ಯುವತಿ ನಾಪತ್ತೆಯಾಗಿದ್ದು, ಆಕೆಯ ಕುಟುಂಬಸ್ಥರು ಪೊಲೀಸರ ಮೊರೆಹೋಗಿದ್ದಾರೆ. ಪೊಲೀಸರು ಆಶ್ರಮದ ಮೇಲೆ ದಾಳಿಯೂ ನಡೆಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ.16): ಕೆಲತಿಂಗಳ ಹಿಂದೆ ಸೂರ್ಯನನ್ನು ಹತೋಟಿಯಲ್ಲಿಟ್ಟು ನಗೆಪಾಟಲಿಗೆ ಈಡಾಗಿದ್ದ ಸ್ವಘೋಷಿತ ದೇವಮಾನವ ನಿತ್ಯಾನಂದನ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಶ್ರಮದಲ್ಲಿದ್ದ 18 ವರ್ಷ ಪ್ರಾಯದ ಯುವತಿ ನಾಪತ್ತೆಯಾಗಿದ್ದು, ಆಕೆಯ ಕುಟುಂಬಸ್ಥರು ಪೊಲೀಸರ ಮೊರೆಹೋಗಿದ್ದಾರೆ. ಪೊಲೀಸರು ಆಶ್ರಮದ ಮೇಲೆ ದಾಳಿಯೂ ನಡೆಸಿದ್ದಾರೆ.

ಅಷ್ಟೇ ಅಲ್ಲ, ಬಿಡದಿ ಆಶ್ರಮದಲ್ಲಿ ಈ ಹಿಂದೆ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಆ ತಂದೆ, ನಿತ್ಯಾನಂದ ಮಕ್ಕಳನ್ನು ವಿದೇಶಕ್ಕೆ ಮಾರುತ್ತಾನೆ ಎಂದು ಕೂಡಾ ಆರೋಪಿಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್....

ಇತ್ತೀಚೆಗೆ ಕೆನಾಡಾದ ಮಹಿಳೆಯೊಬ್ಬರು ‘ನಿತ್ಯಾ ಪುರಾಣ’ವನ್ನು ಬಯಲು ಮಾಡಿದ್ದರು. ಸಾರಾ ಲಾಂಡ್ರಿ ಎಂಬ ಕೆನಡಾದ ಪ್ರಜೆ ನಿತ್ಯಾನಂದ, ಧರ್ಮದ ಹೆಸರಿನಲ್ಲಿ ನಡೆಸುವ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.

ನವೆಂಬರ್ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Related Video